ರಾಕಿಂಗ್ ಸ್ಟಾರ್ ಯಶ್ ಅವರ ಖ್ಯಾತಿಗೆ ಮತ್ತೊಂದು ಪ್ರಶಸ್ತಿಯ ಗರಿ ಸೇರಿದೆ‌.ಈ ಸಾಲಿನ ಅಂದರೆ ಎಂಟನೇ ದಕ್ಷಿಣ ಭಾರತ ಅಂತರರಾಷ್ಟ್ರೀಯ ಸೈಮಾ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ನಾಯಕ ನಟ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಈ ಬಾರಿಯ ಸೈಮಾ ಅಂತರರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಸಮಾರಂಭ ಕತಾರ್ ನ ರಾಜಧಾನಿ ದೋಹಾದಲ್ಲಿ ನಡೆಸಲಾಗಿದೆ. ಈ ಭವ್ಯ ಸಮಾರಂಭದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಅಭಿನಯದ ಬ್ಲಾಕ್ ಬಸ್ಟರ್ ಸಿನಿಮಾ ಕೆಜಿಎಫ್‍ನ ರಾಕಿಭಾಯ್ ಪಾತ್ರಕ್ಕೆ ಅತ್ಯುತ್ತಮ ನಾಯಕ ನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ ನಟ ಯಶ್.

 

ಸೈಮಾ ಅವಾರ್ಡ್ಸ್ ನ ಅತ್ಯುತ್ತಮ ನಾಯಕ ನಟ ಪ್ರಶಸ್ತಿಗೆ ಕೆಜಿಎಫ್ ಚಿತ್ರದಿಂದ ಯಶ್, ಟಗರು ಸಿನಿಮಾದಿಂದ ಹ್ಯಾಟ್ರಿಕ್ ಹೀರೋ ಶಿವಣ್ಣ, ರ್ಯಾಂಬೋ ಚಿತ್ರಕ್ಕಾಗಿ ನಟ 2 ಶರಣ್, ಅಯೋಗ್ಯ ಸಿನಿಮಾದಿಂದ ಸತೀಶ್ ನಿನಾಸಂ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದಿಂದ ಅನಂತ್ ನಾಗ್ ಅವರು ನಾಮಿನೇಟ್ ಆಗಿ , ಖ್ಯಾತ ನಟರ ನಡುವೆ ಸ್ಪರ್ಧೆ ಇತ್ತು. ಕಡೆಗೆ ಪ್ರಶಸ್ತಿ ಕೆಜಿಎಫ್ ನ ರಾಖಿ ಭಾಯ್ ಪಾಲಾಗಿದೆ. ಕೆಜಿಎಫ್ ಸಿನಿಮಾ ಸಾಕಷ್ಟು ಕ್ರೇಜ್ ಸೃಷ್ಟಿ ಮಾಡಿದ್ದು, ಹೊಸ ದಾಖಲೆಗಳನ್ನು ಬರೆದಿದ್ದು ಎಲ್ಲರಿಗೂ ತಿಳಿದ ವಿಷಯ.

 

ಇನ್ನು ಈ ಬಾರಿಯ ಅಂದರೆ ಎಂಟನೇ ದಕ್ಷಿಣ ಭಾರತ ಅಂತಾರಾಷ್ಟ್ರೀಯ ಸೈಮಾ ಪ್ರಶಸ್ತಿ ಸಮಾರಂಭ ಕತಾರ್‍ನ ರಾಜಧಾನಿ ದೋಹಾದಲ್ಲಿ ಭೃರ್ಜರಿಯಾಗಿ ಆಯೋಜಿಸಲ್ಪಟ್ಟಿದ್ದು, ಈ ಪ್ರಶಸ್ತಿ ಸಮಾರಂಭದಲ್ಲಿ ದಕ್ಷಿಣ ಭಾರತದ ನಾಲ್ಕು ಭಾಷೆಗಳ ಸಿನಿಮಾ ಸ್ಟಾರ್ ಗಳು ಒಂದೆಡೆ ಸೇರುವುದು ಮತ್ತೊಂದು ವಿಶೇಷ. ದಕ್ಷಿಣ ಭಾರತ ಚಿತ್ರರಂಗದ ಕಲಾವಿದರ ಮೇಳವೇ ಇದು ಎನ್ನುವಂತೆ ಪ್ರತಿವರ್ಷ ಕಂಗೊಳಿಸುತ್ತದೆ ಸೈಮಾ ಅವಾರ್ಡ್ಸ್ ಸಮಾರಂಭ.  ಇನ್ನುಳಿದಂತೆ ಟಗರು ಚಿತ್ರದ ಅಭಿನಯಕ್ಕಾಗಿ ಧನಂಜಯ ಅವರಿಗೆ ಅತ್ಯುತ್ತಮ ಖಳನಟ ಪ್ರಶಸ್ತಿ ದೊರಕಿದೆ.

Photos credit  :- SIIMA OFFICIAL FACEBOOK

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here