ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್ 2 ಚಿತ್ರದ ಚಿತ್ರೀಕರಣ ಅದ್ದೂರಿಯಾಗಿ ಸಾಗುತ್ತಿದೆ. ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ಕೆಜಿಎಫ್ 2 ಚಿತ್ರದ ಬಗ್ಗೆ ದೇಶಾದ್ಯಂತ ನಿರೀಕ್ಷೆಗಳ ಮಹಾಪೂರವೇ ಇದೆ. ಕೆಜಿಎಫ್ 1 ಚಿತ್ರದ ಮೂಲಕ ಇಡೀ ದೇಶಾದ್ಯಂತ ಹೊಸ ಸಂಚಲನ ಸೃಷ್ಟಿಸಿದ ರಾಕಿಂಗ್ ಸ್ಟಾರ್ ಯಶ್ ಮತ್ತು ಪ್ರಶಾಂತ್ ನೀಲ್ ಜೋಡಿಯ ಕೆಜಿಎಫ್ 2 ಚಿತ್ರದ ಬಗ್ಗೆ ಇನ್ನಿಲ್ಲದ ನಿರೀಕ್ಷೆಗಳು ಇರುವಾಗಲೇ ಕೆಜಿಎಫ್ 2 ಚಿತ್ರದ ಬಗ್ಗೆ  ಹೊಸ ಸುದ್ದಿಯೊಂದು ಹೊರಬಿದ್ದಿದೆ.

ಅದೇನೆಂದರೆ ಕೆಜಿಎಫ್ 2 ಚಿತ್ರಕ್ಕಾಗಿ ರಾಕಿಂಗ್ ಸ್ಟಾರ್ ಯಶ್ ಅವರು ಸಿಕ್ಸ್ ಪ್ಯಾಕ್ ಅಬ್ಸ್ ಮೂಲಕ ಅಭಿಮಾನಿಗಳಿಗೆ ಕಾಣಿಸಿಕೊಳ್ಳಲಿದ್ದು ಈ ಒಂದು ಸನ್ನಿವೇಶಕ್ಕಾಗಿ ಸತತವಾಗಿ ಆರು ತಿಂಗಳಿಂದ ರಾಕಿಂಗ್ ಸ್ಟಾರ್ ಯಶ್ ಅವರು ವರ್ಕೌಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಕೆಜಿಎಫ್ 2 ಚಿತ್ರದಲ್ಲಿನ ಮೇಜರ್ ದೃಶ್ಯಕ್ಕಾಗಿ ರಾಕಿಂಗ್ ಸ್ಟಾರ್ ಯಶ್ ಅವರು ಸಿಕ್ಸ್ ಪ್ಯಾಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸುದ್ದಿ ಹೊರ ಬರುತ್ತಿದ್ದಂತೆ ರಾಕಿಂಗ್ ಸ್ಟಾರ್ ಅಭಿಮಾನಿಗಳು

ಸೋಶಿಯಲ್ ಮೀಡಿಯಾಗಳಲ್ಲಿ  ಯಶ್ ಸಿಕ್ಸ್ ಪ್ಯಾಕ್ ಇರುವತಂತಹ  ಫೋಟೋಗಳನ್ನು ಎಡಿಟ್ ಮಾಡುತ್ತಿದ್ದು ಆ  ಫೋಟೋಗಳು ಈಗಾಗಲೇ ಸಾಕಷ್ಟು ವೈರಲ್ ಆಗುತ್ತಿದೆ. ಗಡ್ಡ ಬಿಟ್ಟು ಕೆಜಿಎಫ್  ಚಿತ್ರದಲ್ಲಿ ಅಬ್ಬರಿಸಿದ್ದ ರಾಕಿಂಗ್ ಸ್ಟಾರ್ ಯಶ್  ಕೆಜಿಎಫ್ 2 ಚಿತ್ರದಲ್ಲಿ ಗಡ್ಡದ ಜೊತೆ  ಸಿಕ್ಸ್ ಪ್ಯಾಕ್ ಕೂಡ ಮಾಡಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ KGF2 ಬಗ್ಗೆ  ಇನ್ನಿಲ್ಲದಂತೆ ಕುತೂಹಲ ಮೂಡಿಸಿದೆ. ಕೆಜಿಎಫ್ 2 ಚಿತ್ರವು ದಸರಾ ಹಬ್ಬದಂದು ತೆರೆಗೆ ಬರುವ ಸಾಧ್ಯತೆಗಳಿವೆ ಸದ್ಯದಲ್ಲೇ ಚಿತ್ರದ ಬಗ್ಗೆ ಅಪ್ಡೇಟ್ ನೀಡುವುದಾಗಿ ನಿರ್ಮಾಪಕರಾದ ಕಾರ್ತಿಕ್  ಗೌಡ ತಿಳಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here