ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ರಾಜ್ಯದ ಪ್ರಮುಖ ದೇವಳಗಳಲ್ಲಿ ಅತಿ ಮುಖ್ಯವಾದುದು. ಇಲ್ಲಿನ ಮಹಾತ್ಮೆ ಹಾಗೂ ಈ ದೇವರ ಮೇಲಿರುವ ನಂಬಿಕೆಯು ಕೂಡಾ ಅಪಾರ. ಜನರು ಬಹಳ ಶ್ರದ್ಧಾ ಭಕ್ತಿಯಿಂದ ಇಲ್ಲಿ ಆರಾಧನೆ ನಡೆಸುತ್ತಾರೆ. ಈ ಹಿಂದೆ ಹೆಲಿಕಾಪ್ಟರ್ ಮೂಲಕ ಈ ದೇವಳವನ್ನು ಸುತ್ತಿ ಬಂದು ಲ್ಯಾಂಡಿಂಗ್ ಮಾಡಿದ ಅನೇಕ ಗಣ್ಯರು ತಮ್ಮ ಕ್ಷೇತ್ರದಲ್ಲಿ ಪತನ ಹೊಂದಿರುವ ಹಾಗೂ ಅಧಿಕಾರ ಕಳೆದುಕೊಂಡಿರುವ ಅನೇಕ ಉದಾಹರಣೆಗಳಿವೆ. ಈಗ ಅಂತಹುದೊಂದು ಅನುಮಾನ ಯಶ್ ಅವರ ಪರವಾಗಿಯೂ ಮೂಡಿದೆ ಜನರಲ್ಲಿ. ಕಾರಣ ಯಶ್ ಅವರು ಮೊನ್ನೆಯಷ್ಟೇ ಹೆಲಿಕಾಪ್ಟರ್ ಮೂಲಕ ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಹೋಗಿ ಬಂದಿದ್ದಾರೆ. ಅವರ ಈ ಪ್ರಯಾಣ ಅನೇಕ ಪ್ರಶ್ನೆಗಳಿಗೆ ಈಗ ಕಾರಣವಾಗಿದೆ‌.

ಕೆಜಿಎಫ್ ಬಿಡುಗಡೆಗೆ ಮುನ್ನವೇ ಭರ್ಜರಿ ಯಶಸ್ಸು ಪಡೆಯುವುದೆಂಬ ನಿರೀಕ್ಷೆಯಲ್ಲಿ ಇರುವಾಗಲೇ, ಅಲ್ಲಿನ ಸ್ಥಳೀಯರು ಮಾತ್ರ ಯಶ್ ಅವರ ಕೆಜಿಎಫ್ ನಿಂದ ಸೋಲಿನ ಕಹಿಯನ್ನು ಸವಿಯಬೇಕಾಗುವುದು ಎಂದು ಮಾತನಾಡಿಕೊಳ್ಳಲು ಆರಂಭಿಸಿದ್ದಾರೆ. ಸ್ಥಳೀಯರು ಈ ರೀತಿ ಹೇಳಲು ಅವರದೇ ಆದ ಕಾರಣವಿದೆ. ಏಕೆಂದರೆ ಈ ಹಿಂದೆಯೂ ಈ ಕ್ಷೇತ್ರಕ್ಕೆ ಹೆಲಿಕಾಪ್ಟರ್ ಮೂಲಕ ಹೋದವರು ಅಧಃಪತನ ಹೊಂದಿರುವ ಉದಾಹರಣೆಗಳನ್ನು ಇಲ್ಲಿನ ಜನರು ನೆನಪಿಸಿಕೊಳ್ಳುತ್ತಾರೆ. ಹಿಂದೆ ಧರ್ಮಸಿಂಗ್ ಅವರು ಮುಖ್ಯಮಂತ್ರಿಗಳಾಗಿದ್ದಾಗ, ಇದೇ ರೀತಿ ಹೆಲಿಕಾಪ್ಟರ್ ಮೂಲಕ ಬಂದು ಹೋದ ಕೆಲವೇ ದಿನಗಳಲ್ಲಿ ಅಧಿಕಾರವನ್ನು ಕಳೆದುಕೊಂಡಿದ್ದರು.

ಅದಾದ ನಂತರ ಪಂಜಾಬಿನ ಮುಖ್ಯಮಂತ್ರಿ ಅಮರಿಂದರ್ , ಮದ್ಯದ ದೊರೆ , ದೊಡ್ಡ ಉದ್ಯಮಿ ವಿಜಯ್ ಮಲ್ಯ ಅವರು ಕೂಡಾ ಹೆಲಿಕಾಪ್ಟರ್ ಮೂಲಕ ಹೋಗಿ ಬಂದ ನಂತರ ಅವರಿಗೂ ಸೋಲುಗಳೇ ಎದುರಾಗಿತ್ತು‌‌. ಆಲಯದ ಸಂಪ್ರದಾಯದ ಪ್ರಕಾರ ದೇವಳದ ಗರುಡನಿಗೆ ಮಾತ್ರ ಆ ರೀತಿ ಆಲಯದ ಪ್ರದಕ್ಷಿಣೆ ಹಾಕುವ ಅನುಮತಿಯಿದೆ. ಆದರೆ ಮಲ್ಯ, ಅಮರಿಂದರ್ ಹಾಗೂ ಧರ್ಮಸಿಂಗ್ ಅವರು ಹೆಲಿಕಾಪ್ಟರ್ ಮೂಲಕ ದೇವಾಲಯವನ್ನು ಸುತ್ತು ಹೊಡೆದು ನಂತರ ಲ್ಯಾಂಡಿಂಗ್ ಮಾಡಲಾಗಿತ್ತು.

 

ಆದರೆ,ಯಶ್ ಅವರ ಹೆಲಿಕಾಪ್ಟರ್ ಆ ರೀತಿ ಆಲಯವನ್ನು ಪ್ರದಕ್ಷಿಣೆ ಮಾಡಲಿಲ್ಲ. ಹಾಗೂ ಅದು ಕುಮಾರಧಾರಾ ಬಳಿಯೇ ಇಳಿಯಿತೆನ್ನಲಾಗಿದೆ. ಪ್ರದಕ್ಷಿಣೆ ಮಾಡಿದ್ದರೆ ಬಹುಶಃ ದೈವದ ಕೋಪಕ್ಕೆ ಗುರಿಯಾಗಬೇಕಿತ್ತೇನೋ, ಆದರೆ ಯಶ್ ಅವರ ಹೆಲಿಕಾಪ್ಟರ್ ಆ ರೀತಿ ಸುತ್ತು ಹೊಡೆಯದೆ ಲ್ಯಾಂಡ್ ಆದ ಕಾರಣ ಯಾವುದೇ ಭಯ ಪಡುವ ಅಗತ್ಯವಿಲ್ಲ ಎಂದು ದೇವಳದ ವ್ಯವಸ್ಥಾಪಕ ಮಂಡಳಿಯವರು ಹೇಳಿದ್ದಾರೆ. ಆದರೆ ಜನರು ತಮ್ಮ ನಂಬಿಕೆಗಳ ಅನುಗುಣವಾಗಿ ಮಾತನಾಡಿದ್ದಾರೆ.

ಏನೇ ಆಗಲಿ ಯಶ್ ಅವರ ಕೆಜಿಎಫ್ ಈಗಾಗಲೇ ದಾಖಲೆಗಳು ಸೃಷ್ಟಿಸುತ್ತಾ ಮುಂದುವರೆದಿದ್ದು, ಕುಕ್ಕೆ ಶ್ರೀ ಸುಬ್ರಹ್ಮಣ್ಯ ನ ಆಶೀರ್ವಾದ ಸದಾ ಇದ್ದೇ ಇರುತ್ತದೆ. ಅಲ್ಲದೆ ಅಪಾರ ಅಭಿಮಾನಿಗಳು ಅವರ ಚಿತ್ರಕ್ಕಾಗಿ ಕಾದಿದ್ದು, ಅಭಿಮಾನಿಗಳ ಪ್ರಾರ್ಥನೆಯನ್ನು ದೇವರು ನಿರಾಕರಿಸಲು ಸಾಧ್ಯವಿಲ್ಲ. ಒಳ್ಳೆಯ ಕೆಲಸಕ್ಕೆ ಸಮರ್ಪಣೆಯ ಭಾವದಿಂದ ದುಡಿದವರ ಸಂಗಡ ದೇವರು ಯಾವಾಗಲೂ ಇರುತ್ತಾನೆ ಎಂಬುದು ಜಗವರಿತ ಸತ್ಯವಲ್ಲವೆ. ಕೆಜಿಎಫ್ ಹಲವರ ಶ್ರಮದಿಂದ ಮೂಡಿ ಬಂದಿರುವ ಚಿತ್ರವಾಗಿದ್ದು, ಶಾಪದ ಭಯ ಈ ಚಿತ್ರಕ್ಕಿಲ್ಲ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here