ರಾಕಿಂಗ್ ಸ್ಟಾರ್ ಯಶ್ ಅಭಿನಯದ  ಕೆ.ಜಿ.ಎಫ್ ಚಿತ್ರದ ಟ್ರೈಲರ್ ನೋಡಿ ಇಡೀ ಭಾರತ ಚಿತ್ರರಂಗವೇ ವಾರೆ ವ್ಹಾ ಎನ್ನುತ್ತಿದೆ. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ತೆರೆಗೆ ಬಂದಿರುವ ಕೆ.ಜಿ.ಎಫ್ ಟ್ರೈಲರ್ ಐದು ಭಾಷೆಗಳಲ್ಲಿ ಉತ್ತಮ‌ ರೆಸ್ಪಾನ್ಸ್ ಪಡೆದಿದೆ. ಎಲ್ಲರೂ ರಾಕಿಂಗ್ ಸ್ಟಾರ್ ಯಶ್ ಅಭಿನಯಕ್ಕೆ ಫಿದಾ ಆಗಿದ್ದು ಪ್ರಶಾಂತ್ ನೀಲ್ ನಿರ್ದೇಶನಕ್ಕೆ ಎಲ್ಲರೂ ಜೈಕಾರ ಹಾಕುತ್ತಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಹೊಸ ಸಂಚಲನ ಸೃಷ್ಟಿಸುತ್ತಿದೆ. ಕೆಜಿಎಫ್ ಟ್ರೈಲರ್ ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಸೃಷ್ಟಿಸಿದ್ದು ಎಲ್ಲಾ ಭಾಷೆಗಳಲ್ಲಿ ಟ್ರೆಂಡ್ ಸೃಷ್ಟಿಸಿದೆ. ಕನ್ನಡ ಚಲನಚಿತ್ರರಂಗದಲ್ಲಿ  ಇದುವರೆಗೂ ಕನ್ನಡ ಚಿತ್ರವೊಂದು ಇಷ್ಟು ದೊಡ್ಡ ಮಟ್ಟದ ಸುದ್ದಿ‌ ಮಾಡಿರಲಿಲ್ಲ.ಟ್ರೈಲರ್ ನೋಡಿ‌ ಕಿಚ್ಚ ಸುದೀಪ್ ಮತ್ತು ಶೃತಿ ಹರಿಹರನ್ ಈ ರೀತಿಯ ಟ್ವೀಟ್ ಮಾಡಿದ್ದಾರೆ.

ಲಾವಾರಸ ಎದ್ದು ಬರುವಂತಿದೆ. ಕೆಜಿಎಫ್​ ಚಿತ್ರ ತಂಡಕ್ಕೆ ನನ್ನ ಶುಭಾಷಯಗಳು. ನಿರ್ದೇಶಕ ಪ್ರಶಾಂತ್​ ಅವರ ಅಧ್ಭುತ ದೃಷ್ಟಿಕೋನಕ್ಕೆ ಹ್ಯಾಟ್ಸ್​ ಹಾಫ್​. ಇಡೀ ಚಿತ್ರ ತಂಡದಿಂದ ಪ್ರಶಾಂತ್​ ಚಿತ್ರವನ್ನು ಮತ್ತೊಂದು ಹಂತಕ್ಕೆ ಕರೆದುಕೊಂಡುಹೋಗಿದ್ದಾರೆ. ಟ್ರೈಲರ್​ನಲ್ಲಿ ಯಶ್​ ಭವ್ಯವಾಗಿ ಕಾಣಿಸಿಕೊಂಡಿದ್ದಾರೆ. ಹೊಂಬಾಳೆ ಸಂಸ್ಥೆಗೆ ಕೀರ್ತಿ ಬರಲಿ’ ಅಂತಾ ತಮ್ಮ ಟ್ವಿಟರ್​​​ ಮೂಲಕ ಹಾರೈಸಿದ್ದಾರೆ.

ಪಂಚಭಾಷೆಗಳಲ್ಲಿ ಟ್ರೈಲರ್​​ ಬಿಡುಗಡೆಗೊಂಡಿದ್ದು, ಚಿತ್ರತಂಡಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ನಟಿ ಶ್ರುತಿ ಹರಿಹರನ್ ಕೂಡ ಕೆಜಿಎಫ್​ ಟ್ರೈಲರ್​ಗೆ ಫಿದಾ ಆಗಿದ್ದಾರೆ. ಕನ್ನಡದ ಅತ್ಯಂತ ದುಬಾರಿ ಬಜೆಟ್​ ಸಿನಿಮಾ ಎಂದೇ ಹೆಸರಾಗಿರೋ, ಕೋಲಾರ ಚಿನ್ನದ ಗಣಿಯ ನಟೋರಿಯಸ್​​ ವ್ಯೂಹದ ಸುತ್ತ ಚಿತ್ರಿಸಿರೋ ಸಿನಿಮಾ ಕೆಜಿಎಫ್​. ನಾವೆಲ್ಲರೂ ಒಂದು ಅಮೋಘ ಸಿನಿಮಾದ ಅನುಭವವನ್ನ ಪಡೆಯಲಿದ್ದೇವೆ ಎನಿಸುತ್ತಿದೆ. ಯಶ್​ ಸರ್​ ಅವರ ಮುಂಬರುವ ಚಿತ್ರ ಕೆಜಿಎಫ್​​- ಅದಕ್ಕಾಗಿ ಕಾಯುತ್ತಿದ್ದೇವೆ ಎಂದು ಶ್ರುತಿ ಹರಿಹರನ್ ಟ್ವೀಟ್​ ಮಾಡಿದ್ದಾರೆ. ಇದರ ಜೊತೆಗೆ ಕೆಜಿಎಫ್​​ ಟ್ರೈಲರ್​ ಹಂಚಿಕೊಂಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here