ಸ್ಯಾಂಡಲ್​ವುಡ್​ನ ಸ್ಟಾರ್​ ಜೋಡಿಗಳಾದ ರಾಕಿಂಗ್​ ಸ್ಟಾರ್​ ಯಶ್​ ಮತ್ತು ರಾಧಿಕಾ ಪಂಡಿತ್​ ಜೋಡಿಯ ಮನೆಗೆ ಇಂದು ಬೆಳಗ್ಗೆ ಹೊಸ ಅತಿಥಿಯ ಆಗಮನವಾಗಿದೆ. ರಾಧಿಕಾ ಪಂಡಿತ್​ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.ಭಾನುವಾರ ಬೆಳಗ್ಗೆ 6.20 ಕ್ಕೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ರಾಧಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮಗು ಆರೋಗ್ಯದಿಂದಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.2016ರ ಡಿಸೆಂಬರ್ 9ಕ್ಕೆ ಸ್ಯಾಂಡಲ್​ವುಡ್​ನ ತಾರಾ ಜೋಡಿ ಯಶ್ ಮತ್ತು ರಾಧಿಕಾ ಮದುವೆಯಾಗಿತ್ತು. ಯಶ್ ಮತ್ತು ರಾಧಿಕಾ ಪಂಡಿತ್ ಅವರು ತಂದೆ ತಾಯಿ ಆಗುತ್ತಿರುವ ವಿಷಯ ತಿಳಿಯುತ್ತಿದ್ದಂತೇ ಮೊದಲು ಎಲ್ಲರೂ ಯಶ್ ಅವರಿಗೆ ಕೇಳಿದ್ದು ಒಂದೇ ಪ್ರಶ್ನೆ..

 

ಅದು ಯಶ್ ಅವರಿಗೆ ಯಾವ ಮಗು ಬೇಕು ? ಗಂಡು ಮಗುನಾ ಅಥವಾ ಹೆಣ್ಣು ಮಗುನಾ ? ಇದಕ್ಕೆ ಯಶ್ ಕೊಟ್ಟ ಉತ್ತರ ನನಗೆ ಹೆಣ್ಣು ಮಗು ಬೇಕು ಎಂದು.ಇದೀಗ ಯಶ್ ಆಸೆಯಂತೇ ಯಶ್ ಮತ್ತು ರಾಧಿಕಾ ಪಂಡಿತ್ ಅವರಿಗೆ ಹೆಣ್ಣು ಮಗು ಜನಿಸಿದೆ.ಯಶ್ ಆಸೆಯೂ ಈಡೇರಿದೆ.ಹೆಣ್ಣು ಮಗು ಜನಿಸಿರುವ ಖುಷಿಯಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಇದ್ದಾರೆ.

ಇದೀಗ ಈ ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದರು. ಇತ್ತೀಚೆಗಷ್ಟೇ ಅದ್ದೂರಿಯಾಗಿ ಸೀಮಂತ ಕಾರ್ಯ ಆಯೋಜನೆ ಮಾಡಿದ್ದ ಯಶ್, ಆಪ್ತರು ಮತ್ತು ಸಿನಿಮಾ ಮಂದಿಗೆ ಆಹ್ವಾನ ನೀಡಿದ್ದರು. ಯಶ್ ಪಾಲಿಗೆ ಡಿಸೆಂಬರ್ ಲಕ್ಕಿ ತಿಂಗಳು. ಡಿಸೆಂಬರ್​ನಲ್ಲೇ ಯಶ್​ ಮನೆಗೆ ಹೊಸ ಅತಿಥಿಯ ಆಗಮನವಾಗಿದ್ದು, ಇದೇ ತಿಂಗಳ ಕೊನೆಯಲ್ಲಿ ಯಶ್​ ಅವರ ಬಹುನಿರೀಕ್ಷಿತ ಚಿತ್ರ ‘ಕೆಜಿಎಫ್​’ ಬಿಡುಗಡೆಯಾಗಲಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here