ಇಂದು ಬೆಳಿಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ರಾಧಿಕಾ ಪಂಡಿತ್ ಅವರು ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಯಶ್ ಅವರು ಈ ಬಾರಿ ಗಂಡು ಮಗುವಿಗೆ ತಂದೆಯಾದ ಸಂಭ್ರಮದಲ್ಲಿ ಇದ್ದಾರೆ. ಇನ್ನು ಮೊಮ್ಮಗನನ್ನು ನೋಡಿದ ಯಶ್ ಅವರ ತಾಯಿ ತಮ್ಮ ಖುಷಿಯನ್ನು ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ.  ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪ ಅವರು ಮೊಮ್ಮಗ ಯಶ್‍ನಂತೆಯೇ ಕಾಣುತ್ತಾನೆ ಎಂದು ಹೇಳುವ ಮೂಲಕ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.ಈ ಬಗ್ಗೆ  ಮಾತನಾಡಿದ ಪುಷ್ಪ, ಇಂದು ಬೆಳಗ್ಗೆ ರಾಧಿಕಾಳನ್ನು ಆಸ್ಪತ್ರೆಗೆ ದಾಖಲಿಸಿದ್ದೆವು. 9 ಗಂಟೆಗೆ ರಾಧಿಕಾ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ.

 

ಕರ್ನಾಟಕದ ಜನತೆಯ ಆಶೀರ್ವಾದ ಇಬ್ಬರ ಮೇಲೆ ಹೇಗಿತ್ತೋ, ಹಾಗೆಯೇ ನಮ್ಮ ಮೊಮ್ಮಕ್ಕಳ ಮೇಲೆಯೂ ಇರಲಿ. ಮೊಮ್ಮಗನನ್ನು ನೋಡಿದೆ. ಆತ ಯಶ್‍ನಂತೆಯೇ ಇದ್ದಾನೆ. ಅಮ್ಮ-ಮಗು ಇಬ್ಬರೂ ಚೆನ್ನಾಗಿದ್ದಾರೆ ಎಂದರು. ದೇವರ ಆಶೀರ್ವಾದದಿಂದ ಇಂದು ನಾವು ಖುಷಿಯಾಗಿದ್ದೇವೆ. ನನ್ನ ಸೊಸೆ ಕೂಡ ಆರೋಗ್ಯವಾಗಿದ್ದಾಳೆ. ಕರ್ನಾಟಕದ ಜನತೆ ಇಷ್ಟು ದಿನ ಯಶ್ ಹಾಗೂ ರಾಧಿಕಾಳನ್ನು ಹೇಗೆ ಆಶೀರ್ವಾದ ಮಾಡಿದ್ದಾರೋ, ಹಾಗೆ ನನ್ನ ಮೊಮ್ಮಕ್ಕಳಿಗೂ ಆಶೀರ್ವಾದ ಮಾಡಲಿ. ವೈದ್ಯರಿಗೂ ಡೇಟ್ಸ್ ಬಗ್ಗೆ ಕನ್ಫರ್ಮ್ ಇರಲಿಲ್ಲ. ಈ ತಿಂಗಳಿನಲ್ಲಿ ಮಗು ಆಗುತ್ತೆ ಎಂದು ಹೇಳಿದ್ದರು. ಆದರೆ ಇಂದು ಬೆಳಗ್ಗೆ ನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದು ಹೇಳಿದರು.

ಐರಾಳನ್ನು ಇಷ್ಟು ಹೊತ್ತು ಎತ್ತುಕೊಂಡಿದ್ದೆವು. ಅವಳು ಕೂಡ ತಮ್ಮನನ್ನು ನೋಡಿ ಖುಷಿಪಡುತ್ತಿದ್ದಾಳೆ. ಡಿಸ್ಚಾರ್ಜ್ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಅದೇನಿದ್ದರೂ ಯಶ್ ನಿರ್ಧಾರ ಮಾಡುತ್ತಾನೆ. ನಾವೇನಿದ್ದರೂ ಬಂದು ಮಗುವನ್ನು ನೋಡಿಕೊಂಡು ಹೋಗುತ್ತೇವೆ. ವೈದ್ಯರು ಇಂದು ಅಥವಾ ನಾಳೆ ಡೆಲಿವರಿ ಆಗುತ್ತೆ ಎಂದು ಹೇಳಿದ್ದರು. ಆದರೆ ಈ ಬಗ್ಗೆ ಹೇಳುವುದಕ್ಕೆ ಆಗಲ್ಲ. ವೈದ್ಯರು ಪ್ರತಿದಿನ ನಮ್ಮ ಸಂಪರ್ಕದಲ್ಲಿ ಇದ್ದರು ಎಂದು ಯಶ್ ಅವರ ತಾಯಿ ತಿಳಿಸಿದಿರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here