ಮಂಡ್ಯದಲ್ಲಿ ಪಕ್ಷೇತರವಾಗಿ ಚುನಾವಣೆಗೆ ನಿಂತಿರುವ ವಿಷಯ ನಾಡಿನ ಎಲ್ಲರಿಗೂ ತಿಳಿದಿರುವ ವಿಷಯ. ಅಲ್ಲದೆ ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ಯಶ್ ಹಾಗೂ ದರ್ಶನ್ ಅವರು ಸುಮಲತ ಅವರ ಪರವಾಗಿ ನಿಂತ ವಿಷಯಕ್ಕೆ ಸಂಬಂಧಿಸಿದಂತೆ ಜೆಡಿಎಸ್ ನಾಯಕರೊಬ್ಬರು ಅವರಿಗೆ ಎಚ್ಚರಿಕೆಯನ್ನು ರವಾನಿಸಿ ಈ ಇಬ್ಬರು ನಟರ ಆಸ್ತಿಗಳ ಮೇಲೆ ರೈಡ್ ಮಾಡಿಸುವುದಾಗಿ ಹೇಳಿದ್ದರು. ಇಂದು ಸುಮಲತ ಅವರು ಚುನಾವಣೆಗೆ ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಯಶ್ ಅವರು ಇಂದು ಸುಮಕ್ಕನ ಕಣ್ಣಲ್ಲಿ ನೀರಿತ್ತು. ಅದಕ್ಕೆ ಕಾರಣ ಕೇಳಿದಾಗ ಅವರು ನಿಮ್ಮ ಮನೆಗಳ ಮೇಲೆ ಐಟಿ ಧಾಳಿ ಮಾಡಿಸ್ತೀವಿ ಅಂತ ಹೇಳ್ತಿದಾರೆ ಎಂದು ಅತ್ತರೆಂಬ ವಿಚಾರವನ್ನು ಯಶ್ ಅವರು ಹೇಳಿದ್ದಾರೆ.

ಯಶ್ ಅವರು ಮಾತನಾಡುತ್ತಾ ಸುಮಲತ ಅವರಿಗೆ ಬೆಂಬಲ ನೀಡುವುದು ತಪ್ಪು ಎನ್ನುವುದಾದರೆ ಆ ತಪ್ಪನ್ನು ಸಾಯೋವರೆಗೆ ಮಾಡ್ತಾ ಇರ್ತೀನಿ ಎಂದು ಹೇಳಿದ್ದಾರೆ. ಅವರು ತಮ್ಮ ಬೆಂಬಲ ಕೇವಲ ಈ ಲೋಕಸಭಾ ಚುನಾವಣೆಗೆ ಮಾತ್ರವಲ್ಲ ಬದಲಾಗಿ ಜೀವನ ಪೂರ್ತಿ ಇರುತ್ತದೆ ಎಂದು ಅವರು ಸುಮಲತ ಅವರಿಗೆ ಮಾತು ನೀಡಿದ್ದಾರೆ. ಅವರು ಮಾತನಾಡುತ್ತಾ ನಾವೇನು ಪಾಕಿಸ್ತಾನದಿಂದ ಬಂದಿಲ್ಲ. ಸಿನಿಮಾದವರು ಎಂದ ಮಾತ್ರಕ್ಕೆ ಕೆಟ್ಟದಾಗಿ ಮಾತನಾಡುವುದು ತಪ್ಪು ಎಂದು ಹೇಳಿದ್ದಾರೆ. ಅವರು ಮಂಡ್ಯ ಹಾಗೂ ತನಗೂ ಇರುವ ಅವಿನಾಭಾವ ಸಂಬಂಧದ ಬಗ್ಗೆಯೂ ಕೂಡಾ ಈ ಸಂದರ್ಭದಲ್ಲಿ ಹೇಳಿದ್ದಾರೆ.

ನಾನು ಮಂಡ್ಯದ ಕಾಲುವೆ ನೀರು ಕುಡಿದು ಬೆಳೆದವನು, ಇಲ್ಲಿನ ಮಣ್ಣು ನನಗೆ ಗೊತ್ತಿದೆ. ಮಂಡ್ಯದ ಆಲೆಮನೆಯಲ್ಲಿ ಬೆಲ್ಲ ತಿಂದಿದ್ದೇನೆ.ಮಂಡ್ಯದ ಜೊತಗೆ ಹೆಚ್ಚಿನ ನಂಟು ಇದೆ. ಇಡೀ ಕರ್ನಾಟಕಕ್ಕೆ ನಮ್ಮ ಋಣ ತೀರಿಸಬೇಕಾಗಿದೆ. ಅದರಲ್ಲಿ ಮಂಡ್ಯದ ಬಗ್ಗೆ ಸ್ವಲ್ಪ ಹೆಚ್ಚಿನದೇ ವಿಶ್ವಾಸವಿದೆ ಎಂದು ಅವರು ಹೇಳಿದರು. ಅವರು ಸುಮಲತ ಅವರಿಗೆ ದೈರ್ಯವಾಗಿ ಇರುವಂತೆ ಹೇಳಿರುವುದು ಮಾತ್ರವಲ್ಲದೆ, ಅಲ್ಲಿನ ಜನರಾರು ದುಡ್ಡಿಗೆ ಬಂದವರಲ್ಲ ಎಂಬುದಾಗಿ ಹೇಳಿದ್ದಾರೆ. ಸ್ವಾಭಿಮಾನಕ್ಕಾಗಿ ಮನೆ ಮಠಗಳನ್ನು ತ್ಯಾಗ ಮಾಡುವವರು ಮಂಡ್ಯದ ಜನತೆ. ನಿಶ್ಚಿಂತೆಯಿಂದ ಇರಿ ಎಂದು ಭರವಸೆ ನೀಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here