KGF ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ದಶ ದಿಕ್ಕುಗಳಿಗೂ ಪಸರಿಸುವಂತೆ ಮಾಡಿರುವ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಹಾಗೂ ಕೆಜಿಎಫ್ ಚಿತ್ರತಂಡಕ್ಕೆ ಎಲ್ಲೆಡೆಯಿಂದ ಪ್ರಶಂಸೆಯ ಸುರಿಮಳೆಯಾಗುತ್ತಿದೆ. ಸ್ಯಾಂಡಲ್ ವುಡ್ ನ ಬಹುತೇಕ ನಟ, ನಟಿಯರು ಕೆಜಿಎಫ್ ಚಿತ್ರಕ್ಕೆ ಬೆಂಬಲಿಸುವ ಮೂಲಕ ನಾವೆಲ್ಲಾ ಒಂದೇ ಎಂಬ ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ಕನ್ನಡ ಚಿತ್ರಗಳಿಗೆ ಮಾರುಕಟ್ಟೆ ವಿಸ್ತರಿಸಿರುವ ಕೆಜಿಎಫ್ ಚಿತ್ರವನ್ನು ಶಿವಣ್ಣ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಕಿಚ್ಚ ಸುದೀಪ್, ದರ್ಶನ್ , ಸೇರಿದಂತೆ ಅನೇಕ ಹಿರಿ, ಕಿರಿಯ ನಟ, ನಟಿಯರು ಬೆಂಬಲಿಸಿದ್ದು  ಇನ್ನಷ್ಟು ಇಂತಹ ಚಿತ್ರಗಳು ನಿರ್ಮಾಣವಾಗಲಿ ಎಂದು ಆಶಿಸಿದ್ದಾರೆ.

ಕೆಜಿಎಫ್ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಫೇಸ್ ಬುಕ್ , ಟ್ವಿಟರ್ ಮತ್ತಿತರ ಸಾಮಾಜಿಕ ಜಾಲತಾಣಗಳ ಮೂಲಕ ಚಿತ್ರಕ್ಕೆ ಶುಭ ಕೋರಿದ್ದರು.
ಕೆಜಿಎಫ್ ತಂಡಕ್ಕೆ ಶುಭಾಶಯ ಕೋರಿ ಪುನೀತ್ ಮಾಡಿದ ಟ್ವೀಟ್ ಗೆ ರಾಕಿಂಗ್ ಸ್ಟಾರ್ ಯಶ್ ರೀ ಟ್ವೀಟ್ ಮಾಡಿದ್ದು, ಪುನೀತ್ ರಾಜ್ ಕುಮಾರ್ ಅವರ ಮುಂಬರುವ ನಟ ಸಾರ್ವಭೌಮ ಟೀಸರ್ ವೀಕ್ಷಿಸಿದ್ದು, ಡ್ಯಾನ್ಸ್ ಚಿಂದಿಯಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಆ ಚಿತ್ರ ಬಿಡುಗಡೆಗೆ ಕುತೂಹಲದಿಂದ ಕಾಯುತ್ತಿರುವುದಾಗಿ ಯಶ್ ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಯಶ್

ಪೈಪೋಟಿಯ ಕಾಲದಲ್ಲಿ, ಸ್ಟಾರ್ ವಾರ್ ಗಳ ಮಧ್ಯೆ ಇಂತಹ ಸ್ನೇಹಪೂರ್ವಕ ನಡವಳಿಕೆಗಳು ಕನ್ನಡ ಚಿತ್ರರಂಗ ಮತ್ತಷ್ಟು ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿವೆ ಎಂಬಂತ ಮೆಚ್ಚುಗೆಯ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.ಇನ್ನು ಕೆಜಿಎಫ್ ಚಿತ್ರದ ಜೊತೆಗೆ ನಟಸಾರ್ವಭೌಮ ಚಿತ್ರದ ಟೀಸರ್ ಬಿಡುಗಡೆ ಆಗಿತ್ತು‌.ಯೂಟ್ಯೂಬ್‌ನಲ್ಲಿ ನಾಸಾರ್ವಭೌಮ ಟೀಸರ್ ಗೆ ಬಾರೀ ಬೆಂಬಲ ಸಹ ವ್ಯಕ್ತವಾಗುತ್ತಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here