ವರ್ಷಕ್ಕೊಮ್ಮೆ ಶಿವನಿಗೆ ತಲೆಬಾಗಿ ವಂದಿಸಲು ಒಂದು ಸರ್ಪದ ಜೋಡಿ ಅಂದರೆ ನಾಗ-ನಾಗಿಣಿಯ ಜೋಡಿಯು ದೇವಾಲಯಕ್ಕೆ ಬರುತ್ತವೆ ಹಾಗೂ ಯಾರಿಗೂ ಯಾವುದೇ ಹಾನಿ ತರುವುದಿಲ್ಲ ಎಂದಾಗ ಎಲ್ಲರಿಗೂ ಇದು ವಿಸ್ಮಯ ಎನಿಸಬಹುದು. ಆದರೆ ಈ ವಿಸ್ಮಯ ಒಂದು ಸತ್ಯ ಎಂಬುದು ವಾಸ್ತವ. ಭಾರತದಲ್ಲಿ ಅನೇಕ ನಿಗೂಢವಾದ ಶಿವಾಲಯಗಳಿದ್ದು, ಅನೇಕ‌ ಪವಾಡಗಳು ನಡೆಯುತ್ತವೆ ಆದರೆ ಅದರ ರಹಸ್ಯ ಮಾತ್ರ ಇಂದಿಗೂ ಹಾಗೇ ಉಳಿದಿವೆ. ಮಹಾ ಶಿವನು ಮಾನವರಿಗೆ ಮಾತ್ರವಲ್ಲ,ಪಶು ಪಕ್ಷಿಗಳಿಗೆ ಕೂಡಾ ಪ್ರಿಯನು. ಅದಕ್ಕೆ ಆತನನ್ನು ಪಶುಪತಿ ಎಂದೂ ಕರೆಯಲಾಗುತ್ತದೆ. ಅದರಲ್ಲೂ ಸರ್ಪಗಳು ಶಿವನೊಂದಿಗೆ ವಿಶೇಷವಾಗಿ ಗುರುತಿಸಲ್ಪಟ್ಟಿವೆ.

ಶ್ರೀ ಸಂಗಮೇಶ್ವರ ಮಹಾದೇವ್ ದೇವಸ್ಥಾನವು ಹರಿಯಾಣದ, ಕೈಥಲ್ ಜಿಲ್ಲೆಯ ಪೆಹೊವಾ ಎಂಬಲಿದ್ದು, ಕಾರ್ತಿಕ ಮಾಸದ ಸೋಮವಾರಗಳಲ್ಲಿ ಲಕ್ಷಾಂತರ ಯಾತ್ರಿಕರು ಶಿವಲಿಂಗ ಆರಾಧನೆ ಮಾಡಲು ಇಲ್ಲಿಗೆ ಬರುತ್ತಾರೆ. ಅದರಲ್ಲೂ ವರ್ಷಕ್ಕೊಮ್ಮೆ ಈ ಆಲಯಕ್ಕೆ ಇಬ್ಬರು ವಿಶೇಷ ಭಕ್ತರು ಇಲ್ಲಿಗೆ ಬರುತ್ತಾರೆ. ಅವರೇ ಆ ಜೋಡಿ ನಾಗಗಳು. ಅವು ಲಿಂಗವನ್ನು ಪ್ರದಕ್ಷಿಣೆ ಮಾಡಿ ಹೋಗುತ್ತವೆ. ಇಲ್ಲಿಯವರೆಗೆ ಆ ಸರ್ಪಗಳು ಯಾವುದೇ ಭಕ್ತರಿಗೂ ಹಾನಿ ಮಾಡಿಲ್ಲ. ಪುರಾಣಗಳ ಪ್ರಕಾರ, ಶಿವಲಿಂಗನ ರೂಪದಲ್ಲಿ ಸಾಕ್ಷಾತ್ ಭಗವಾನ್ ಶಿವನು ಇಲ್ಲಿ ನೆಲೆಗೊಂಡಿದ್ದಾನೆ.

ಈ ಆಲಯದಲ್ಲಿ ಶಿವಲಿಂಗ ದರ್ಶನ ಮಾಡಿದರೆ ಮನಸ್ಸಿಗೆ ನೆಮ್ಮದಿ ಹಾಗೂ ಶಾಂತಿ ಸಿಗುತ್ತದೆಂಬುದು ಪ್ರತೀತಿ. ಮಾನಸಿಕ ತೊಂದರೆ ಇರುವವರಿಗೆ ಇಲ್ಲಿನ ಶಿವಲಿಂಗಕ್ಕೆ ಜಲಾಭಿಷೇಕ ಮಾಡಿದರೆ ಅವರಲ್ಲಿ ಸುಧಾರಣೆ ಕಂಡುಬರುತ್ತದೆ ಎಂಬುದು ಭಕ್ತರ ನಂಬಿಕೆ. ಈ ಆಲಯದಲ್ಲಿ ಶಿವನಿಗೆ ಜಲಾಭಿಷೇಕ ಮಾಡಿ, ಪೂಜಿಸಿ, ಅಲ್ಲಿರುವ ಬಿಲ್ವ ಪತ್ರೆಯ ಮರಕ್ಕೆ ದಾರವನ್ನು ಕಟ್ಟುವುದರಿಂದ ಮನೋಭಿಷ್ಠೆಗಳು ನೆರವೇರುತ್ತವೆ ಎಂದು ಅಪಾರವಾದ ವಿಶ್ವಾಸವನ್ನು ಹೊಂದಿದ್ದಾರೆ ಭಕ್ತರು. ಹರಕೆ ತೀರಿದ ಮೇಲೆ ಭಕ್ತರು ಮತ್ತೆ ಆಲಯಕ್ಕೆ ಬಂದು ಮರಕ್ಕೆ ಕಟ್ಟಿರುವ ದಾರವನ್ನು ಬಿಚ್ಚಬೇಕು ಎಂಬುದು ಕೂಡಾ ಪ್ರತೀತಿ.‌ ನಿಜಕ್ಕೂ ಇದೊಂದು ಅದ್ಬುತವಾದ ಮಂದಿರವೇ ಹೌದು‌.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here