ಮಾಜಿ ಸಿಎಂ ಸಿದ್ಧರಾಮಯ್ಯನವರು ಇಂದಿನ ಅಧಿವೇಶನದಲ್ಲಿ ಹಾಲಿ ಸಿಎಂ ಯಡಿಯೂರಪ್ಪ ಅವರು ಮುಂದಿನ ಮೂರು ವರ್ಷ ಸಿಎಂ ಆಗಿದ್ದರೆ ಒಳ್ಳೆಯದು ಆದರೆ ನೀವು ಇರ್ತಿರೋ ಇಲ್ಲೋ ಗೊತ್ತಿಲ್ಲ. ಏಕೆಂದರೆ ನಿಮ್ಮ ಪಕ್ಷದೊಳಗೆ ಏನೇನೋ ನಡೆಯುತ್ತಿದೆ ಎಂದು ಹೇಳಿದ್ದಾರೆ. ಎಲ್ಲವನ್ನು ಗಮನಿಸಿದರೆ ನೀವು ಮುಂದಿನ ಮೂರು ವರ್ಷ ಸಿಎಂ ಆಗಿರೋದು ಅನುಮಾನ ಎಂದಿದ್ದಾರೆ. ಅವರು ತಮ್ಮ ಮಾತಿನಲ್ಲಿ ಯಡಿಯೂರಪ್ಪ ಅವರ ವಿರುದ್ಧ ಅವರ ಪಕ್ಷದವರೇ ಮಸಲತ್ತು ಮಾಡುತ್ತಿದ್ದಾರೆ, ಯಾವುದೇ ಸಂದರ್ಭದಲ್ಲಿ ಅವರು ತಮ್ಮ ಸ್ಥಾನವನ್ನು ಕಳೆದುಕೊಳ್ಳಬಹುದು” ಎಂದು ವ್ಯಂಗ್ಯವಾಡುವ ಮೂಲಕ ಕಾಲೆಳಿದ್ದಾರೆ.

ಈ ಸಂದರ್ಭದಲ್ಲಿ ಸಿದ್ಧರಾಮಯ್ಯನವರು ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಆ ವಿಚಾರದ ಕಡೆಗೆ ಎಲ್ಲರ ಗಮನವನ್ನು ಸೆಳೆದಿದ್ದಾರೆ. 2022-23 ರ ವೇಳೆಗೆ ರಾಜ್ಯದ ಆದಾಯ 43,000 ಕೋಟಿ ರೂಗಳಷ್ಟು ಖೋತಾ ಆಗಲಿದೆ ಎಂದಿರುವ ಅವರು ರಾಜ್ಯದಲ್ಲಿ ವಿವಿಧ ವೇತನಗಳು, ಸಬ್ಸಿಡಿ ಕಳೆದು ನಮ್ಮ ತೆರಿಗೆ ಹಣದಲ್ಲಿ 26,000 ಕೋಟಿ ರೂ‌‌.ಮಾತ್ರ ಸಿಗುತ್ತಿದ್ದು, ಇಷ್ಟು ಕಡಿಮೆ ಹಣದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ 14 ನೇ ಹಣಕಾಸು ಆಯೋಗದಿಂದ ಹೆಚ್ಚುವರಿ ಹಣ ಪಡೆದರೂ ಕೂಡಾ ಅತಿ ಹೆಚ್ಚು ಸಾಲ ಮಾಡಿದ ಮುಖ್ಯಮಂತ್ರಿ ಎಂಬ ಖ್ಯಾತಿ ನಿಮ್ಮದು ಎಂದು ಸಿದ್ಧರಾಮಯ್ಯನವರು ಟೀಕೆ ಮಾಡಿದ್ದಾರೆ.

ನೀವೇಕೆ ಅಲ್ಪಸಂಖ್ಯಾತರಿಗೆ 750 ಕೋಟಿ ರೂ ಅನುದಾನ ಕಡಿಮೆ ಮಾಡಿರುವಿರಿ? ಅನ್ನ ಭಾಗ್ಯ ದ ಅಕ್ಕಿ ಕಡಿಮೆ ಮಾಡಿರುವಿರಿ? ಮುಂದಿನ ದಿನಗಳು ಕರ್ನಾಟಕದ ಆರ್ಥಿಕತೆಯ ಪಾಲಿಗೆ ಕತ್ತಲೆಯಾಗಿ ಕಾಣುತ್ತಿವೆ ಎಂದು ಸಿದ್ಧರಾಮಯ್ಯನವರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ ಜಿ.ಎಸ್.ಟಿ ಯ ನ್ಯೂನತೆ ಗಳ ಬಗ್ಗೆ ಕೂಡಾ ಗಮನಸೆಳೆದ
ಅವರು 15 ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಬರಬೇಕಾಗಿರುವ ತೆರಿಗೆ ಹಣದ ಖೋತಾ ಸರಿಪಡಿಸಿ ಕಮಿಟೆಡ್ ಎಕ್ಸಪೆಂಡೀಚರ್ ಪ್ರಮಾಣ ಕಡಿಮೆ ಮಾಡಿ ಎಂದು ಸಲಹೆಯನ್ನು ನೀಡಿದ್ದಾರೆ. ಅಲ್ಲದೆ ರಾಜ್ಯದಲ್ಲಿ ಕಮರ್ಷಿಯಲ್ ಟ್ಯಾಕ್ಸ್ ವಿವಾದಗಳು 21,000 ಕೋಟಿ ರೂ. ಅಬಕಾರಿ ಇಲಾಖೆಯಿಂದ 7500 ಕೋಟಿ ರೂ.ತೆರಿಗೆ ಬಾಕಿ ಬರಬೇಕಿದ್ದು ಅವುಗಳನ್ನು ವಸೂಲಿ ಮಾಡಿದರೆ ಕೊರತೆ ಸರಿದೂಗಿಸಬಹುದೆಂದು, ಕೇವಲ ಸಾಲದಿಂದ ಪ್ರಯೋಜನ ಏನಿಲ್ಲಾ ಎಂದು ಅವರು ಹೇಳಿದ್ದಾರೆ.‌

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here