ರಾಜ್‌ರ ಕಾಲಿಗೆ ಬಿದ್ದರೇಕೆ ಕಲ್ಪನಾ.ಹೌದು ಕನ್ನಡ ಚಿತ್ರರಂಗದ ಬ್ಲಾಕ್‌ಬಸ್ಟರ್ ಚಿತ್ರ ಎರಡು ಕನಸು. ಆ ಕಾಲದಲ್ಲಿ ಬಂದ ಅದ್ಭುತವಾದ ಲವ್ ಸ್ಟೋರಿ ಚಿತ್ರಗಳಲ್ಲಿ ಎರಡು ಕನಸು ಪ್ರಮುಖ ಚಿತ್ರ.ಈ ಚಿತ್ರದಲ್ಲಿ ಡಾ.ರಾಜ್‍ಕುಮಾರ್ ಅವರ ಅಭಿನಯ ಅಂತೂ ಅತ್ಯದ್ಭುತ.

ಡಾ.ರಾಜ್‍ಕುಮಾರ್ ಅವರಿಗೆ ಪೈಪೋಟಿ ಕೊಡುವಂತೇ ಕಲ್ಪನ ಮತ್ತು ಮಂಜುಳ ಅಭಿನಯಿಸಿದ್ದರು.ಒಮ್ಮೆ‘ಎರಡು ಕನಸು’ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯ. ರಾಜ್-ಕಲ್ಪನಾ ಇಬ್ಬರೂ ಪೈಪೋಟಿಗೆ ಬಿದ್ದವರಂತೆ ಹೃದಯಂಗಮವಾಗಿ ಅಭಿನಯಿಸಿದರು. ದೃಶ್ಯ ನಿರ್ದೇಶಕರಾದ ದೊರೆ-ಭಗವಾನ್‌ರವರ ಕಲ್ಪನೆಗೂ ಮೀರಿ ಯಶಸ್ವಿಯಾಗಿ ಮೂಡಿಬಂತು.

ವಾಸ್ತವವಾಗಿ ಕಲ್ಪನಾ ಅಭಿನಯಕ್ಕೆ ಮನಸೋತು ರಾಜ್‌ರ ಕಣ್ತುಂಬಿ ಬಂದು ಎರಡೂ ಕೈ ಜೋಡಿಸಿ-ಕಲ್ಪನಾರಿಗೆ ನಮಸ್ಕರಿಸಿದರು ರಾಜ್. ಮೂಕವಿಸ್ಮಿತರಾದ ಕಲ್ಪನಾ ಕೂಡಲೇ ರಾಜ್‌ರ ಕಾಲಿಗೆ ಬಿದ್ದು-‘ನನಗೇಕಣ್ಣಾ ಕೈ ಮುಗಿಯುತ್ತೀರಿ-ನಾನು ನಿಮಗಿಂತ ತುಂಬಾ ಕಿರಿಯಳು!’ ಎಂದರು.

ರಾಜ್, ಕಲ್ಪನಾರನ್ನು ಹಿಡಿದು ಮೇಲೆತ್ತಿ- ‘ನೀನು ಕಿರಿಯಳಾದರೂ ನಿನ್ನಲ್ಲಿ ಮನೆಮಾಡಿಕೊಂಡಿರುವ ಆ ಕಲಾದೇವಿ ಸರಸ್ವತಿ ಅತ್ಯಂತ ಹಿರಿಯಳು, ಅಲ್ವೇನಮ್ಮಾ? ಅದಕ್ಕೆ ಕರ ಜೋಡಿಸಿ ಕೈ ಮುಗಿದೆ’ ಎಂದರು. ಕಲ್ಪನಾ ಮೊದಲೇ ಅತ್ಯಂತ ಭಾವುಕರು. ರಾಜ್‌ರ ಕಾಲಬಳಿ ಕುಸಿದು ಬಿದ್ದರು. ಅದೇ ಸಂದರ್ಭದಲ್ಲಿ ಕಲ್ಪನಾ ಹೇಳಿದ್ದು ಏನು ಗೊತ್ತೆ?

‘ಇದು ಇಂದು ನನಗೆ ವೃತ್ತಿ ಜೀವನದಲ್ಲಿ ಕಲಾವಿದೆಯಾಗಿ ದೊರೆತ ದೇವರ ಆಶೀರ್ವಾದ’. ಕಲ್ಪನಾರವರಲ್ಲಿ ರಾಜ್ ಕಲಾದೇವಿಯನ್ನು ಕಂಡರೆ, ಕಲ್ಪನಾ ರಾಜ್‌ರವರಲ್ಲಿ ದೇವರನ್ನು ಕಂಡುಕೊಂಡರು. ತುಂಬಿದ ಕೊಡಗಳೆಂದರೆ ಹೀಗೆ ಇರಬಹುದೇನೊ?

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here