ಪಡೆದ ಸಾಲವನ್ನು ಹಿಂತಿರುಗಿಸಲಾಗದ ಸಂಕಷ್ಟದಲ್ಲಿ ಇರುವ ಹಿನ್ನೆಲೆಯಲ್ಲಿ ಸುಪ್ರಸಿದ್ಧ ಉದ್ಯಮಿ ಅನಿಲ್ ಅಂಬಾನಿ ಅವರ ಒಡೆತನದಲ್ಲಿರುವ ಮುಂಬೈನ ಉಪನಗರ ಸಾಂತಕ್ರೂಜ್ ನಲ್ಲಿನ ಅವರ ಕೇಂದ್ರ ಕಛೇರಿಯನ್ನು ಯಸ್ ಬ್ಯಾಂಕ್ ತನ್ನ ಸ್ವಾಧೀನಕ್ಕೆ ಪಡೆದುಕೊಂಡಿದೆ. ಅನಿಲ್ ಅಂಬಾನಿ ಗ್ರೂಪ್ ಆಫ್ ಕಂಪನಿ ಈ ಬ್ಯಾಂಕ್ ನಿಂದ ಸುಮಾರು 2 ಸಾವಿರದ 892 ಕೋಟಿ ರೂಗಳನ್ನು ಸಾಲವನ್ನಾಗಿ ಪಡೆದಿತ್ತು ಎನ್ನಲಾಗಿದೆ. ಆದರೆ ಸಾಲವನ್ನು ನಿಗಧಿತ ಸಮಯದಲ್ಲಿ ಮರು ಪಾವತಿ ಮಾಡಿಲ್ಲವಾದ ಕಾರಣ ಇದೀಗ ಬ್ಯಾಂಕ್ ಕಂಪನಿಯ ಕೇಂದ್ರ ಕಛೇರಿಯನ್ನು ಸ್ವಾಧೀನಕ್ಕೆ ಪಡೆದಿದೆ.‌

ಇದು ಮಾತ್ರವೇ ಅಲ್ಲದೇ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಗೆ ಸೇರಿದ ದಕ್ಷಿಣ ಮುಂಬೈನ ಎರಡು ಫ್ಲಾಟ್ ಗಳನ್ನು ಕೂಡಾ ವಶಪಡಿಸಿಕೊಳ್ಳಲಾಗಿದೆ. ಅನಿಲ್ ಅಂಬಾನಿ ಅವರಿಗೆ ಸೇರಿದ ಬಹುತೇಕ ಕಂಪನಿಗಳು ಈಗಾಗಲೇ ಅವರ ಸಾಂತಾಕ್ರೂಜ್ ಕಛೇರಿಯಿಂದ ಹೊರ ಬಂದು, ರಿಲಯನ್ಸ್ ಸೆಂಟರ್ ಮುಖಾಂತರ ತಮ್ಮ ಕಾರ್ಯ ನಿರ್ವಹಿಸುತ್ತಿವೆ ಎನ್ನಲಾಗಿದೆ.‌ ಇತ್ತೀಚಿನ ವರ್ಷಗಳಲ್ಲಿ ಅನಿಲ್ ಅಂಬಾನಿ ಅವರ ಕಂಪನಿಗಳು ಬ್ಯಾಂಕ್ ದಿವಾಳಿತನ ಹಾಗೂ ಷೇರು ಮಾರಾಟದ ಮೂಲಕ ದೊಡ್ಡ ಪ್ರಮಾಣದ ನಷ್ಟ ಅನುಭವಿಸಿದೆ ಎನ್ನಲಾಗಿದೆ.‌

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here