ಕ್ರಿಕೆಟ್ ವೃತ್ತಿ ಜೀವನಕ್ಕೆ ಸೋಮವಾರ ನಿವೃತ್ತಿ ಘೋಷಿಸಿದ ಆಲ್ ರೌಂಡರ್ ಯುವರಾಜ್ ಸಿಂಗ್ ಬಗ್ಗೆ ಅವರ ತಾಯಿ ಶಬನಮ್ ಸಿಂಗ್ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಮಗನನ್ನು ನೋಡಿದವರು ಅವನ ಹಾವ ಭಾವದಿಂದಾಗಿ ಇವನ ಸೋಮಾರಿ, ಇವನೇನು ಆಡ್ತಾನೆ ಎನ್ನುತ್ತಿದ್ದರು ‌ಆದರೆ ಮೈದಾನಕ್ಕೆ ಇಳಿದರೆ ಆತನನ್ನು ಸೋಮಾರಿ ಎಂದವರೇ ಆಶ್ಚರ್ಯದಿಂದ ಹುಬ್ಬೇರಿಸುವಂತೆ ಆಡುತ್ತಿದ್ದ ಎಂದು ಸಂತಸ ಪಡುತ್ತಾರೆ ಆ ತಾಯಿ. ಬಾಲ್ಯದಿಂದಲೂ ಮಗ ಕ್ರಿಕೆಟ್ ಆಟಗಾರನಾಗಬೇಕೆಂದು ಯುವರಾಜ್ ಅವರ ತಂದೆ ಯೋಗರಾಜ್ ಸಿಂಗ್ ಅವರು ಕಂಡ ಕನಸನ್ನು ಮಗ ಶ್ರಮವಹಿಸಿ ಸಾಧಿಸಿದ ಎಂಬ ತೃಪ್ತಿ ಅವರಿಗಿದೆ.

ಬಾಲ್ಯದಲ್ಲಿ ಬಹಳ ಶಾಂತವಾಗಿರುತ್ತಿದ್ದ ಯುವರಾಜ್ ಅವರು ಹದಿನೇಳು ದಾಟಿದ ನಂತರ ಬಹಳ ತುಂಟನಾದರಂತೆ. ಅದರ ಜೊತೆಗೆ ಸ್ವಲ್ಪ ಮುಂಗೋಪ ಬೇರೆ ಇತ್ತು ಎನ್ನುತ್ತಾರೆ ಅವರ ತಾಯಿ. 2011 ರ ವಿಶ್ವಕಪ್ ನಲ್ಲಿ ಮಗ ಆಡಿದ ರೀತಿಯನ್ನು ಬಹುವಾಗಿ ಮೆಚ್ಚುವ ಅವರು ಆ ಆಟ ಇಂದಿಗೂ ತನ್ನ ಕಣ್ಮುಂದೆ ಇದೆ ಎಂದು ಮಗನ ಸಾಧನೆಯನ್ನು ಕೊಂಡಾಡಿದ್ದಾರೆ. ಅಲ್ಲದೆ ಅದಾದ ನಂತರದಲ್ಲಿ ಯುವರಾಜ್ ಅವರು ಕ್ಯಾನ್ಸರ್ ಸಮಸ್ಯೆಯಿಂದ ಬಳಲಿದ ದಿನಗಳನ್ನು ನೆನಪಿಸಿಕೊಳ್ಳುವ ಅವರ ತಾಯಿ ಆ ದಿನಗಳಲ್ಲಿ ಮಗನ ನೋವು, ತಾವು ಜೊತೆಯಾಗಿ ಇದ್ದು ಕಳೆದ ಆ ದಿನಗಳನ್ನು ನೆನೆದು ಭಾವುಕರಾಗುತ್ತಾರೆ.

ಮಗ ಕ್ರಿಕೆಟ್ ನಿಂದ ನಿವೃತ್ತ ಹೊಂದಿದ್ದ ಬಗ್ಗೆ ಅವರು ಎಲ್ಲದಕ್ಕೂ ಒಂದು ಅಂತ್ಯ ಹಾಗೂ ಆರಂಭ ಇರುತ್ತದೆ ಎನ್ನುವ ಆಕೆ, ಮುಂದೆ ಇನ್ನೂ ಉತ್ತಮ ಕೆಲಸ, ಜನರಿಗೆ ಸಹಾಯ ಮಾಡಲು ಯುವಿ ಕ್ಯಾನ್ಸರ್ ಫೌಂಡೇಶನ್ ಹಾಗೂ ಕ್ರಿಕೆಟ್ ಅಕಾಡೆಮಿ ಮೂಲಕ ಮುಂದಾಗಲಿದ್ದಾರೆ ಎಂದು ಹೇಳುವ ಆಕೆಗೆ ತಮ್ಮ ಮಗನ ಸಾಧನೆ, ಕ್ಯಾನ್ಸರ್ ನೊಡನೆ ಹೋರಾಡಿ ಗೆದ್ದು ಬಂದ ರೀತಿ ಎಲ್ಲವೂ ಒಂದು ಹೋರಾಟದಂತೆ ಕಾಣುತ್ತದೆ. ದೇಶ ಪ್ರತಿನಿಧಿಸಿದ ಮಗ ಈಗ ಆಟದಿಂದ ಹಾಗೂ ಸಮಾಜದಿಂದ ತಾನೇನು ಗಳಿಸಿದನೋ, ಅದನ್ನು ಸಮಾಜಕ್ಕೆ ಮರಳಿ ಕೊಡುವುದಕ್ಕೆ ಇದು ಸೂಕ್ತ ಸಮಯ ಎನ್ನುತ್ತಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here