ಬೆಂಗಳೂರು ಗ್ರಾಮಾಂತರದಲ್ಲಿ ಚುನಾವಣಾ ಪ್ರಚಾರ ಕಾರ್ಯ ಬಹಳ ಜೋರಾಗಿ ನಡೆದಿದ್ದು, ಕಾಂಗ್ರೆಸ್ ನ ಡಿ.ಕೆ.ಶಿವಕುಮಾರ್ ಅವರು ಪ್ರಚಾರ ಕಾರ್ಯದಲ್ಲಿ ತಮ್ಮ ಮಾತಿನ ಝರಿಯನ್ನು ಹರಿಸಿದ್ದಾರೆ ಹಾಗೂ ಬಿಜೆಪಿಯ ಯೋಗೀಶ್ವರ್ ಅವರ ವಿರುದ್ಧವಾಗಿ ಟೀಕಾ ಪ್ರಹಾರವನ್ನು ಬಹಳ ಜೋರಾಗಿ ನಡೆಸಿದ್ದಾರೆ. ಪಾಪ ಅವನ್ಯಾರೋ ಯೋಗೀಶ್ವರ್ ಸುದ್ದಿ ಎಲ್ಲಾ ಯಾಕೆ, ಅದೆಲ್ಲಾ ಮುಗಿದು ಹೋದ ಕಥೆ ಎಂದು ಡಿಕೆ ಶಿವಕುಮಾರ್ ಅವರು ಟೀಕೆ ಮಾಡಿದ್ದಾರೆ. ಯೋಗೀಶ್ವರ್ ವಿಷಯಾನ ಯಡಿಯೂರಪ್ಪಾನೇ ಸೀರಿಯಸ್ ಆಗಿ ತಗೋಳ್ಳೋದಿಲ್ಲ ಅಂತಹುದರಲ್ಲಿ ನಾನು ಯಾಕೆ ಸೀರಿಯಸ್ ಆಗಿ ತಗೊಳ್ಳಿ ಎಂದು ಅವರು ಮಾತನಾಡಿದ್ದಾರೆ.

ಬಿಜೆಪಿಯವರೇ ಅವನನ್ನು ಲೆಕ್ಕಕ್ಕೆ ತಗೊಂಡಿಲ್ಲ. ಇನ್ನು ನಾನು ಯಾಕೆ ಅವನನ್ನು ಲೆಕ್ಖ್ಕೆ ಇಟ್ಕೊಳ್ಳಿ, ಲೆಕ್ಕಕ್ಕೆ ಇಟ್ಕೊಂಡಿದ್ರೆ ಗಂಡಸು ಎಂದು ಅಭ್ಯರ್ಥಿ ಮಾಡಿ ಚುನಾವಣಾ ಕಣಕ್ಕೆ ಇಳಿಸ್ತಾ ಇದ್ರು, ಆದರೆ ಪಾಪ ಸಿನಿಮಾ ಗಿನಿಮಾ ಅಂತ ಮಾಡ್ಕೊಂಡು ರೆಸ್ಟ್ ತಗೋಳ್ಳಿ ಬಿಡಿ ಎಂದು ಟೀಕೆಯಲ್ಲೇ ಯೋಗಿಶ್ವರ್ ಅವರ ಬಗ್ಗೆ ಅನುಕಂಪದ ಮಾತನ್ನು ಅವರು ಆಡಿದ್ದಾರೆ. ಅವರ ಮಾತಿನಲ್ಲಿ ಯೋಗಿಶ್ವರ್ ಅವರ ಕುರಿತಾಗಿ ಡಿಕೆಶಿ ಅವರ ಕಟುವಾದ ಭಾವನೆಗಳನ್ನು ತಿಳಿದುಕೊಳ್ಳಬಹುದಾಗಿದೆ.

ಮಾತು ಮುಂದುವರೆಸಿದ ಅವರು ಅವನು ಯಾವ್ದೋ ಪಾರ್ಟಿಗೆ ಸೇರಿದ್ದಾನಲ್ವ, ಅದೇ ಬಿಜೆಪಿಗೆ ಸೇರಿದ್ದಾನಲ್ವ. ಎಲ್ಲಾ ಏಜನ್ಸಿ ಬೇರೆ ಮಾಡಿಕೊಂಡಿದ್ದಾನಲ್ವ, ಯಾವುದೋ ಕಪ್ಪು, ಬಿಳಿ ಹಣ ಇದೆ ಅಂತ ಅದನ್ನೆಲ್ಲಾ ಈಚೆಗೆ ತಂದು ಹಾಕ್ಕೊಳ್ಳಲ್ಲಿ ಎಂದು ಅವರು ಮಾತನಾಡಿದ್ದಾರೆ. ಪ್ರಚಾರ ಭಾಷಣದಲ್ಲಿ ಒಟ್ಟಾರೆ ಯೋಗೀಶ್ವರ್ ಅವರು ಡಿಕೆ ಶಿವಕುಮಾರ್ ಅವರ ಮಾತುಗಳ‌ ಧಾಳಿಗೆ , ಅವರ ಟೀಕೆಗಳಿಗೆ ಆಹಾರವಾಗಿದ್ದಾರೆ ಎಂಬುದಂತೂ ಸತ್ಯ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here