81ರ ವೃದ್ಧನಂತೆ ವೇಷ ಮರೆಸಿಕೊಂಡು ಬಂದ 32 ವರ್ಷದ ಯುವಕ… 32 ವರ್ಷದ ಯುವಕನೊಬ್ಬ 81ರ ವರ್ಷದ ಮುದುಕನಂತೆ ಬಿಳಿ ತಲೆಕೂದಲು, ಗಡ್ಡ ಮೂಲಕ ವಿಮಾನ ನಿಲ್ದಾಣ ಸಿಬ್ಬಂದಿಗೆ ಮೋಸ ಮಾಡಲು ಹೋಗಿ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.ಜಯೇಶ್​ ಪಟೇಲ್​ ವಂಚನೆ ಮಾಡಿದ ಯುವಕ. ಅಹಮದಬಾದ್​ನ ಈತ ತಲೆಗೆ ಬಿಳಿ ಬಣ್ಣ ಹಚ್ಚಿ ಮುದುಕನಂತೆ ವೇಷ ಧರಿಸಿ ನ್ಯೂಯರ್ಕ್​ನಿಂದ ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದ್ದಾನೆ.

ನ್ಯೂಯಾರ್ಕ್​ನಿಂದ ಯಾರಿಗೂ ಅನುಮಾನ ಬಾರದಂತೆ ಬಂದ ಈತನ ಅಸಲಿಯತ್ತ ದೆಹಲಿಯಲ್ಲಿ ಪತ್ತೆಯಾಗಿದೆ. ವೀಲ್​ಚ್ಹೇರ್​ನಲ್ಲಿ ಪ್ರಯಾಣಿಸುತ್ತಿದ್ದ ಈತನನ್ನು ಸೂಕ್ಷ್ಮವಾಗಿ ಗಮನಿಸಿದ ಇಂದಿರಾ ಗಾಂಧಿ ವಿಮಾನ ನಿಲ್ದಾಣದ ಸಿಬ್ಬಂದಿಗೆ ಈತನ ಮುಖ ಚಹರೆಯಲ್ಲಿ ಅನುಮಾನ ಬಂದು ವಿಚಾರಿಸಿದ್ದಾರೆ.

ಈತನ ಪಾಸ್​ಪೋರ್ಟ್​ ಚೆಕ್​ ಮಾಡಿದಾಗ ಈತ ಅಮರಿಕ್​ ಸಿಂಗ್​ ಎಂದು ತನಗೆ 81 ವರ್ಷ ಎಂದು ನಮೂದಿಸಿತ್ತು. ಆದರೆ, ಈತನ ಮುಖದಲ್ಲಿ ಮಾತ್ರ ವಯೋಸಹಜ ನೆರಿಗೆಗಳು ಇರಲಿಲ್ಲ., ಧ್ವನಿಯಲ್ಲಿ ದೃಢತೆ ಕೂಡ ಎದ್ದು ಕಾಣುತ್ತಿತ್ತು. ಕಣ್ಣಿಗೆ ಹಾಕಿದ್ದ ಕನ್ನಡ ಜೀರೋ ಪವರ್​ ಆಗಿತ್ತು ಆಗ ಈತ ಮೋಸ ಮಾಡುತ್ತಿರುವುದು ಪತ್ತೆಯಾಗಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here