ಪ್ರಧಾನಿ ನರೇಂದ್ರ ಮೋದಿಯವರು ಇಂದು ಇಡೀ ದೇಶದ ಜನರಿಗೆ ಶಾರ್ವರಿ ನಾಮ ಸಂವತ್ಸರದ ಯುಗಾದಿ ಹಬ್ಬದ ಶುಭಾಶಯನ್ನು ಕೋರಿದ್ದಾರೆ. ಪ್ರಧಾನಿಯವರು ತಮ್ಮ ಶುಭಾಶಯವನ್ನು ಕನ್ನಡ ಹಾಗೂ ವಿವಿಧ ಭಾಷೆಗಳಲ್ಲಿ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ. ಅವರು ದೇಶದ ವಿವಿಧ ಭಾಗಗಳಲ್ಲಿ ಇಂದು ಆಚರಿಸುತ್ತಿರುವ ಯುಗಾದಿಗೆ ಜನರಿಗೆ ಶುಭಾಶಯವನ್ನು ವಿವಿಧ ಭಾಷೆಗಳಲ್ಲಿ ಕೋರಿದ್ದಾರೆ. ಪ್ರಧಾನಿ ಮೋದಿಯವರು ಕನ್ನಡ ನಾಡಿದ ಜನರಿಗೆ ಕನ್ನಡ ಭಾಷೆಯಲ್ಲಿ ಯುಗಾದಿಯ ವಿಶೇಷ ದಿನದಂದು ಟ್ವೀಟ್ ಮಾಡಿರುವ ಶುಭಾಶಯ ಹೀಗಿದೆ.

ಯುಗಾದಿ ಹೊಸ ವರ್ಷ ಬಂದಿದೆ!
ಈ ವರ್ಷ ಆಕಾಂಕ್ಷೆಗಳನ್ನು ಈಡೇರಿಸಲಿ, ವಿಪತ್ತುಗಳಿಂದ ಹೊರಬರಲು ಹೊಸ ಚೈತನ್ಯ ತರಲಿ ಎಂದು ನಾನು ಪ್ರಾರ್ಥಿಸುತ್ತೇನೆ.
ಪ್ರತಿಯೊಬ್ಬರಿಗೂ ಸಂತಸ ಮತ್ತು ಅದಕ್ಕಿಂತ ಮಿಗಿಲಾಗಿ ಉತ್ತಮ ಆರೋಗ್ಯದ ಆಶಿರ್ವಾದವಿರಲಿ ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ನಾಡಿನ ಜನರು ಹೊಸ ವರ್ಷದ ಈ ಸಂದರ್ಭದಲ್ಲಿ ವಿಪತ್ತು ಗಳನ್ನು ಎದುರಿಸಲು ಹೊಸ ಚೈತನ್ಯವನ್ನು ಪಡೆಯಲಿ ಎಂದು ಅವರು ಪ್ರಾರ್ಥಿಸುವ ಜೊತೆಗೆ ಉತ್ತಮ ಆರೋಗ್ಯ ಎಲ್ಲರಿಗೂ ಸಿಗಲಿ ಎಂದು ಆಶಿಸಿದ್ದಾರೆ.

ನಮ್ಮ ಸಾಂಪ್ರದಾಯಿಕ ಕ್ಯಾಲೆಂಡರ್ ಪ್ರಕಾರ ನಾವು ಭಾರತದಾದ್ಯಂತ ಇಂದು ವಿವಿಧ ಹಬ್ಬಗಳನ್ನು ಆಚರಿಸುತ್ತಿದ್ದೇವೆ ಮತ್ತು ಹೊಸ ವರ್ಷದ ಪ್ರಾರಂಭವನ್ನೂ ಆಚರಿಸುತ್ತಿದ್ದೇವೆ. ಉಗಾದಿ, ಗುಡಿ ಪಾಡ್ವ, ನವ್ರೆಹ್ ಮತ್ತು ಸಾಜಿಬು ಚೀರೊಬಾ ಆಚರಿಸುತ್ತಿರುವವರಿಗೂ ಶುಭಾಶಯಗಳು. ಈ ಶುಭ ಸಂದರ್ಭಗಳು ನಮ್ಮ ಜೀವನದಲ್ಲಿ ಉತ್ತಮ ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯನ್ನು ತರಲಿ
ಎಂದು ಶುಭಾಶಯ ಕೋರುತ್ತಾ ಇವುಗಳ ಆಚರಣೆ ಎಂದಿನಂತಿರುವುದಿಲ್ಲ, ಇವು ನಮ್ಮಲ್ಲಿ ಪರಿಸ್ಥಿತಿಯನ್ನು ಮೆಟ್ಟಿ ನಿಲ್ಲುವ ಶಕ್ತಿ ತುಂಬುತ್ತದೆ ಎಂದಿದ್ದಾರೆ.‌

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here