ವಿಶ್ವ ವಿಖ್ಯಾತ ಮೈಸೂರು ದಸರಾ ಅಂದರೆ ಅದು ಕರ್ನಾಟಕಕ್ಕೆ ಹಬ್ಬ‌. ದಸರೆಯ ವೈಭವವನ್ನು ಸವಿಯಲು ದೇಶದ ವಿವಿಧೆಡೆಯಿಂದ ಜನರು ಮೈಸೂರಿಗೆ ಬರುವರು‌. ವಿದೇಶಗಳಿಂದಲೂ ಕೂಡಾ ಜನರು ಈ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಬರುವರು‌. ದಸರ ಆರಂಭವಾದರೆ ನಾಡಿನ ಎಲ್ಲರಿಗೂ ಸಂತಸದ ಸುದ್ದಿಯೇ ಸರಿ. ಮೈಸೂರು ದಸರೆ ಶತ ಶತಮಾನಗಳಿಂದಲೂ ತನ್ನ ಅಸ್ತಿಸ್ವವನ್ನು ಉಳಿಸಿಕೊಂಡು, ಇಂದು ಅದು ವಿಶ್ವ ಪ್ರಸಿದ್ಧವಾಗಿದೆ. ಈ ಬಾರಿಯ ದಸರೆ ಆರಂಭವಾಗಲು ಇನ್ನೇನು ಕೆಲವೇ ದಿನಗಳು ಉಳಿದಿವೆ.

ಅಕ್ಟೋಬರ್ ಒಂದರಿಂದ ಆರಂಭವಾಗಲಿರುವ ಈ ಬಾರಿಯ ಯುವ ದಸರ ಮಹೋತ್ಸವವನ್ನು ಉದ್ಘಾಟನೆ ಮಾಡಲು, ಬ್ಯಾಡ್ಮಿಂಟನ್ ಚಾಂಪಿಯನ್ ಆದ ಪಿ.ವಿ.ಸಿಂಧು ಅವರನ್ನು ಆಹ್ವಾನಿಸಲಾಗಿದೆ. ಯುವ ದಸರೆಯ ಉದ್ಘಾಟನೆಗೆ ಆಗಮಿಸುವಂತೆ ಈಗಾಗಲೇ ರಾಜ್ಯದ ಮುಖ್ಯಮಂತ್ರಿ ಸಿಎಂ ಯಡಿಯೂರಪ್ಪನವರು ಪತ್ರ ಮುಖೇನ ಪಿ.ವಿ.ಸಿಂಧು ಅವರನ್ನು ಆಹ್ವಾನಿಸಿದ್ದರು. ಇಂದು ಸಂಸದ ಪ್ರತಾಪ್ ಸಿಂಹ ಅವರು ಖುದ್ದಾಗಿ ಪಿ.ವಿ.ಸಿಂಧು ಅವರನ್ನು ಭೇಟಿ ಮಾಡಿ, ಸಾಂಪ್ರದಾಯಿಕ ವಿಧಿಯಂತೆ ಆಹ್ವಾನವನ್ನು ನೀಡಿದ್ದಾರೆ.

ಪ್ರತಾಪ್ ಸಿಂಹ ಅವರ ಜೊತೆಗೆ ಮೈಸೂರು ಜಿಲ್ಲೆಯ ಎಸ್.ಪಿ. ರಿಷ್ಯಂತ್ ಅವರು ಕೂಡಾ ಆ ಸಂದರ್ಭದಲ್ಲಿ ಅಲ್ಲಿ ಉಪಸ್ಥಿತರಿದ್ದರು. ಪ್ರತಾಪ್ ಸಿಂಹ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದು, ಪಿ.ವಿ.ಸಿಂಧು ಹಾಗೂ ಅವರ ಕುಟುಂಬದ ಆಗಮನಕ್ಕೆ ಕಾಯುತ್ತಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ. ಮೈಸೂರಿನಲ್ಲಿ ಈ ಬಾರಿ ನಡೆಯಲಿರುವ ಯುವ ದಸರ ಕಾರ್ಯಕ್ರಮ ಪಿ.ವಿ.ಸಿಂಧು ಅವರು ಉದ್ಘಾಟನೆ ಮಾಡುವುದು ಖಚಿತವಾಗಿದೆ‌.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here