ಬಾಟಲ್ ಕ್ಯಾಪ್ ಚಾಲೆಂಜ್ ಇಂಟರ್ನೆಟ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಹೊಸ ಸೆ‌ನ್ಸೇಷನ್ ಒಂದನ್ನು ಕ್ರಿಯೇಟ್ ಮಾಡಿದೆ. ಈ ಚಾಲೆಂಜ್ ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿ ಗಳ ವರೆಗೂ ಎಲ್ಲರನ್ನೂ ತನ್ನತ್ತ ಸೆಳೆದಿದ್ದು, ಅನೇಕರು ಈ ಚಾಲೆಂಜನ್ನು ಸ್ವೀಕರಿಸಿ, ಅದನ್ನು ಯಶಸ್ವಿಯಾಗಿ ಮಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ವೈರಲ್ ಆಗಿವೆ. ಅಂದರೆ ಬಾಟಲ್ ನ‌ ಕ್ಯಾಪ್ ಅನ್ನು ಕಾಲಿನಿಂದ ಹೊಡೆತ ನೀಡುವ ಮೂಲಕ ತೆರೆದುಕೊಳ್ಳುವಂತೆ ಮಾಡುವ ಸ್ಟಂಟ್ ಇದಾಗಿದ್ದು, ಯುವ ಜನರನ್ನು ವಿಶೇಷವಾಗಿ ಆಕರ್ಷಿಸಿದೆ.

ಈ ಚಾಲೆಂಜನ್ನು ಸ್ವೀಕರಿಸಿದವರಲ್ಲಿ ಸ್ಯಾಂಡಲ್ ವುಡ್ ನಲ್ಲಿ ಅರ್ಜುನ್ ಸರ್ಜಾ, ಗೋಲ್ಡನ್ ಸ್ಟಾರ್ ಗಣೇಶ್, ರಚಿತಾ ರಾಮ್, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹಾಗೂ ದರ್ಶನ್ ಅವರ ಪುತ್ರ ಕೂಡಾ ಮಾಡಿ ಆ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಈದ ಇದೇ ಚಾಲೆಂಜಿಗೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರು ಕೂಡಾ ಫಿದಾ ಆಗಿದ್ದು, ಅವರು ಅದನ್ನು ಪ್ರಯತ್ನಿಸಿದ್ದಾರೆ, ಆದರೆ ಅವರು ತಾನು ಎಲ್ಲರಂತಲ್ಲ ಎಂದು ಬಹಳ‌ ವಿಭಿನ್ನ ಹಾಗೂ ವಿಶಿಷ್ಠವಾದ ರೀತಿಯಲ್ಲಿ ಚಾಲೆಂಜನ್ನು ಸ್ವೀಕಾರ ಮಾಡಿ, ಹೊಸದಾ‌ದ ಚಾಲೆಂಜನ್ನು ‌ನೀಡಿದ್ದಾರೆ.

ಯುವರಾಜ್ ಅವರು ನೀರಿನ ಬಾಟಲಿ ಯನ್ನು ಒಟ್ಟು ಕಾಲಿನಿಂದ ಕ್ಯಾಪನ್ನು ಕಾಲಿನ ಬದಲಾಗಿ, ಕ್ರಿಕೆಟ್ ಬಾಲಿನ ಹೊಡತದ ಮೂಲಕ ತೆಗೆಯುವುದನ್ನು ಮಾಡಿದ್ದಾರೆ. ಅಂದರೆ ಕ್ರಿಕೆಟ್ ಬ್ಯಾಟ್ ಹಿಡಿದು ಬಾಟಲಿಗೆ ಬಾಲಿನಿಂದ ಸ್ಟ್ರೈಟ್ ಡ್ರೈವ್ ಶಾಟ್ ಮಾಡಿದ್ದಾರೆ. ಚೆಂಡು ನೇರವಾಗಿ ಬಾಟೊಲಿಗೆ ಬಿದ್ದು ಮುಚ್ಚಳ ತೆರೆದುಕೊಂಡು, ಬಾಟಲ್ ಹಾಗೂ ಅದರ ಕ್ಯಾಪ್ ಎರಡೂ ಕೆಳಗೆ ಬಿದ್ದಿದೆ. ಹೀಗೆ ಬಾಟಲ್ ಚಾಲೆಂಜನ್ನು ಯುವರಾಜ್ ಅವರು ತಮ್ಮದೇ ಸ್ಟೈಲಿನಲ್ಲಿ ಸ್ವೀಕರಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here