ಕರ್ನಾಟಕ ರಾಜ್ಯದಲ್ಲಿ ಕಳೆದ ಎರಡು ಮೂರು ವಾರಗಳಿಂದ ಜಲಪ್ರಳಯ ಸಂಭವಿಸಿ ರಾಜ್ಯದ ಜನರನ್ನು ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿದೆ. ಬೆಳಗಾವಿ, ಕೊಡಗು, ಗದಗ್, ಧಾರವಾಡ, ಶಿವಮೊಗ್ಗ, ಉತ್ತರಕನ್ನಡ, ರಾಯಚೂರು, ಬಾಗಲಕೋಟೆ, ಸೇರಿ ಹಲವು ಜಿಲ್ಲೆಗಳಲ್ಲಿ ಜನರು ಪ್ರವಾಹದ ಕರಾಳ ಮುಖದಿಂದ ನಲುಗಿ ಹೋಗಿದ್ದಾರೆ. ಕನ್ನಡಿಗರು ಆಸ್ತಿ ಪಾಸ್ತಿ ಜಾನುವಾರು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ನಾಡಿನ ಜನರ ಕೈ ಹಿಡಿದವರು, ನೆರವಿಗೆ ಧಾವಿಸಿದವರು ಕನ್ನಡಿಗರು ಮಾತ್ರವೇ ಹೊರತು ಬೇರೆಲ್ಲಿಂದಲೂ ಯಾರೂ ಕೂಡಾ ಬಂದಿಲ್ಲ‌.

ಅದನ್ನು ಕುರಿತಾಗಿ ಯುವರಾಜ್ ಕುಮಾರ್ ಅವರು ತಮ್ಮ ಆಲೋಚನೆಯೊಂದನ್ನು ಹಂಚಿಕೊಂಡಿದ್ದಾರೆ.
ನಮ್ಮ ಕರ್ನಾಟಕದ ಎಷ್ಟೋ ಜಿಲ್ಲೆಗಳಲ್ಲಿ ಇಂದು ಜಲಪ್ರಳಯದ ಪರಿಣಾಮದಿಂದ ಲಕ್ಷಾಂತರ ಜನರು ಸಂಕಷ್ಟದಲ್ಲಿದಾರೆ. ಅವರಲ್ಲಿ ನೂರಾರು ಜನರು ನಿರಾಶ್ರಿತರಾಗಿದ್ದು, ಅವರಿಗೆ ಆಹಾರವಿಲ್ಲ, ಮೂಲಭೂತ ಸೌಕರ್ಯಗಳಿಲ್ಲ. ಆದರೆ ಅದೆಲ್ಲವನ್ನು ಒದಗಿಸಬೇಕೆಂದು ನಾವು ಕನ್ನಡಿಗರು, ಇಲ್ಲಿನ ಸಂಘ ಸಂಸ್ಥೆಗಳು, ಸೇನೆಯ ದಳಗಳು, ಕರ್ನಾಟಕ ಸರ್ಕಾರ ಎಲ್ಲರೂ ಒಂದಾಗಿ ಕೈಲಾದಷ್ಟು ಸಹಾಯ ಮಾಡಲು ಪ್ರಯತ್ನ ಪಡುತ್ತಿದ್ದೇವೆ. ಆದರೆ ಒಂದು ವಿಷಯ ಇಲ್ಲಿ ಗಮನಿಸಬೇಕಿದೆ.

ಅದೇನೆಂದದರೆ ಎಲ್ಲಾ ಹೊರಗಿನ ಸೆಲೆಬ್ರಿಟಿಗಳು, ಸ್ಟಾರ್‌ಗಳು ಮತ್ತು ರಾಜಕಾರಣಿಗಳು ತಮ್ಮ ಚಲನಚಿತ್ರಗಳನ್ನು ಪ್ರಚಾರ ಮಾಡಲು, ತಮ್ಮ ಬ್ರಾಂಡ್ ಅನ್ನು ಉತ್ತೇಜಿಸಲು, ತಮ್ಮ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಲು, ಮತ ಕೇಳಲು ಎಂದು ಕರ್ನಾಟಕಕ್ಕೆ ಬರುವವರು ಈಗ ಎಲ್ಲಿದ್ದಾರೆ? ಅವರು ಯಾರೂ ಬಂದಿಲ್ಲ, ಸಹಾಯ ಮಾಡೋದ್ ಇರಲಿ, ನನಗೆ ಯಾರ ಟ್ವೀಟ್ , ಪೋಸ್ಟ್ ನೋಡಿದ ನೆನಪು ಕೂಡಾ ಆಗುತ್ತಿಲ್ಲ ! ಎಂದು ಹೇಳಿದ್ದಾರೆ. ಕಡೆಯಲ್ಲಿ ಅವರು ನಾನು ಏನಾದರೂ ತಪ್ಪು ಹೇಳುತ್ತಿದ್ದೇನೆಯೇ? ತಪ್ಪಿದರೆ ಕ್ಷಮೆ ಇರಲಿ ಎನ್ನುತ್ತಾ
ಯಾರೇ ಬರಲಿ ಬಿಡಲಿ ನಮ್ಮವರ ಜೊತೆ ,ಎಲ್ಲರ ಜೊತೆ ನಾವು ಇರೋಣ ಎಂದು ಸಂದೇಶ ನೀಡಿದ್ದಾರೆ.

ಯುವರಾಜ್ ಅವರ ಈ ಆಲೋನೆಯು ಅಕ್ಷರಶಃ ಸತ್ಯವಾಗಿದೆ. ಏಕೆಂದರೆ ಕರ್ನಾಟಕಕ್ಕೆ ಈವರೆಗೂ ಯಾವೊಬ್ಬ ಪರಭಾಷೆ ಸೆಲೆಬ್ರಿಟಿ ಗಳಾಗಲೀ, ರಾಜಕಾರಣಿಗಳಾಗಲೀ, ನಟರಾಗಲೀ ಪ್ರವಾಹ ಸಂತ್ರಸ್ತರಿಗೆ ಸಹಾಯಹಸ್ತ ನೀಡಲು ಮುಂದೆ ಬಂದಿಲ್ಲ ಎಂಬುದು ಒಂದು ರೀತಿಯಲ್ಲಿ ಆಲೋಚಿಸಬೇಕಾದ ವಿಷಯವಾಗಿದೆ. ಅವರ ವ್ಯಾಪಾರ, ವ್ಯವಹಾರಗಳಿಗೆ ಕರ್ನಾಟಕವನ್ನು ನೆಚ್ಚಿರುವ ಮಂದಿ, ಈಗ ಎಲ್ಲಿ ಹೋದರು ಎಂಬುದು ನಿಜಕ್ಕೂ ಆಲೋಚಿಸಲೇ ಬೇಕಾದ ವಿಷಯವಾಗಿದೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here