ಕನ್ನಡ ಚಿತ್ರರಂಗ ಎಂದರೆ ಥಟ್ಟನೆ ನೆನಪಾಗೋದು ದೊಡ್ಮನೆ ಎಂದು ಅಥವಾ ಡಾ‌.ರಾಜ್‍ಕುಮಾರ್ ಎಂಬ ದೈತ್ಯ ಪ್ರತಿಭೆಯ ನಾಮದೇಯ. ಇಂತಹ ಪ್ರಖ್ಯತ ಡಾ.ರಾಜ್ಕುಮಾರ್ ಕುಟುಂಬ ಕನ್ನಡ ಚಿತ್ರರಂಗಕ್ಕೆ ತನ್ನದೇ ಆದ ಸೇವೆ ಸಲ್ಲಿಸುತ್ತಾ ಬಂದಿದೆ ಅಣ್ಣಾವ್ರ ಐದು ದಶಕಗಳ ಕಾಲ ಇಡೀ ಚಿತ್ರರಂಗದ ಜೀವನದಲ್ಲಿ ಕನ್ನಡ ಚಿತ್ರಗಳ ಜೈತ್ರಯಾತ್ರೆ ಮಾಡಿದ್ದರು ಅದಾದ ನಂತರ ಅಣ್ಣಾವ್ರ ಮಕ್ಕಳಾದ ಡಾ.ಶಿವರಾಜಕುಮಾರ್ ಆಗಮನವಾಗಿ ಶುರುವಿನಿಂದಲೂ ಕನ್ನಡ ಚಿತ್ರರಂಗದ ನಕ್ಷತ್ರವಾಗಿ ಇಂದಿಗೂ ಮಿಂಚುತ್ತಿದ್ದಾರೆ. ನಂತರ ಬಂದ ರಾಘವೇಂದ್ರ ರಾಜ್‍ಕುಮಾರ್ ಕೂಡ ಹಲವು ವರ್ಷಗಳ ಸೂಪರ್ ಹಿಟ್ ಚಿತ್ರಗಳನ್ನು ನೀಡುತ್ತ ಸಿನಿರಸಿಕರನ್ನು ರಂಜಿಸಿದರು. ಇನ್ನು ಪುನೀತ್ ರಾಜ್‍ಕುಮಾರ್ ಚಿಕ್ಕವಯಸ್ಸಿನಿಂದಲೇ ತಂದೆಯ ಜೊತೆ ಬಣ್ಣ ಹಚ್ಚಿ ಇಂದಿಗೂ ಚಿತ್ರರಂಗದ ಮಿನುಗುತಾರೆಯಾಗಿ ಚಿತ್ರರಂಗದ ಸೇವೆ ಸಲ್ಲಿಸುತ್ತಿದ್ದಾರೆ.

ಇದು ಅಣ್ಣಾವ್ರ ಎರಡನೇ ತಲೆಮಾರು ಚಿತ್ರರಂಗದ ಸೇವೆಯ ವಿಷಯವಾದರೆ ಅಣ್ಣಾವ್ರ ಮೊಮಕ್ಕಳೂ ಕೂಡ ಕನ್ನಡ ಚಿತ್ರರಂಗದಲ್ಲಿ ಭದ್ರ ಬೂನಾದಿ ಹಾಕುವತ್ತ ಹೆಜ್ಜೆಹಾಕುತ್ತಿದ್ದು ಮೂರು ವರ್ಷಗಳ ಹಿಂದೆಯೇ ರಾಘವೇಂದ್ರ ರಾಜ್‍ಕುಮಾರ್ ಅವರ ಮೊದಲ ಪುತ್ರ ವಿನಯ್ ರಾಜ್‍ಕುಮಾರ್ ಕೂಡ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು ವಿನಯ್ ಅಭಿನಯದ ಸಿದ್ದಾರ್ಥ ಯಶಸ್ಸಿಯಾಗುವ ಮೂಲಕ ರಾಜ್ ಮೊಮ್ಮಗನ ಸಿನಿಮಾ ಕನ್ನಡ ಚಿತ್ರರಂಗಕ್ಕೆ ಭರವಸೆ ಮೂಡಿಸುವ ಯತ್ನ ಮಾಡಿತ್ತು ಈಗ ವಿನಯ ರಾಜ್‍ಕುಮಾರ್ ಇದೀಗ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಅಭಿನಯಿಸತ್ತಿದ್ದು ಸದ್ಯ ಅನಂತು ವರ್ಷಸ್ ನುಸ್ರತ್ ಚಿತ್ರ ಬಿಡುಗಡೆಗೆ ತಯಾರಿಗೆ ಅದಾದ ನಂತರ ಗ್ರಾಮಾಯಣ ಎಂಬ ಮತ್ತೊಂದು ಸಿನಿಮಾ ಕೂಡ ಶುರುವಾಗಿದೆ. ಇದಿಷ್ಟು ವಿನಯ್ ಸುದ್ದಿಯಾದರೆ ರಾಘವೇಂದ್ರ ರಾಜ್‍ಕುಮಾರ್ ಅವರ ಮತ್ತೊಬ್ಬ ಪುತ್ರ ಯುವ ರಾಜ್‍ಕುಮಾರ್ ಕೂಡ ಸಿನಿರಂಗಕ್ಕೆ ಕಾಲಿಡಲು ತಯಾರಾಗಿದ್ದಾರೆ.

ಕಳೆದ ಎರಡು ತಿಂಗಳಿಂದ ಬಾಂಬೆಯ ಪ್ರತಿಷ್ಠಿತ ಸಿನಿಮಾ ತರಭೇತಿ ಕೇಂದ್ರದಲ್ಲಿ ತರಭೇತಿ ಪಡೆಯುತ್ತಿರುವ ಯುವರಾಜ್ ಕುಮಾರ್ ಇತ್ತೀಚೆಗೆ ತಮ್ಮ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಬ್ಯಾಕ್ ಸ್ಟಂಟ್ ಮಾಡುವ ಸೂಪರ್ ವೀಡಿಯೋ ಹರಿಬಿಟ್ಟಿದ್ದಾರೆ. ಸದ್ಯ ಈ ವೀಡಿಯೋ ನೋಡಿದ ಚಿತ್ರರಂಗದ ಹಲವಾರು ಮಂದಿ ಯುವರಾಜಕುಮಾರ್ ಅವರ ಯುವರಾಜ್ ಕುಮಾರ್ ಸಾಹಸಕ್ಕೆ ವ್ಹಾವ್ ಎಂದು ಶಹಬ್ಬಾಶ್ ಗಿರಿ ವ್ಯಕ್ತಪಡಿಸಿದ್ದಾರೆ.  ಇನ್ನು ಕೆಲದಿನಗಳ ಕಾಲ ಬಾಂಬೆಯಲ್ಲಿ ಚಿತ್ರ ತರಭೇತಿ ಪಡೆಯಲಿರುವ ಯುವರಾಜ್ ಬರುವ ವರ್ಷ ಚಿತ್ರರಂಗದ ಪಾದಾರ್ಪಣೆ ಮಾಡುವ ಸಾಧ್ಯತೆ ಇದೆ.ಈ ಮೂಲಕ ಡಾ.ರಾಜ್ ಕುಟುಂಬದ ಮೂರನೇ ತಲೆಮಾರಿದ ಮತ್ತೊಂಡು ಕುಡಿ ಎಂಟ್ರಿಗೆ ಭರ್ಜರಿ ಸಿದ್ದತೆ ನಡೆದಿದೆ. ಅಲ್ಲಿವರೆಗೂ ಯುವರಾಜ್ ಸ್ಟಂಟ್ ನೋಡಿ ನೀವೂ ಎಂಜಾಯ್ ಮಾಡಬಹುದು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here