ಯುವರಾಜ್ ಇಂದು ನಿವೃತ್ತಿ ಹೇಳಲಿದ್ದಾರೆಂದು ನಿನ್ನೆಯಿಂದ ಸಾಮಾಜಿಕ ತಾಣಗಳಲ್ಲಿ ಭಾರೀ ಸುದ್ದಿಯಾಗಿತ್ತು. ಅದರಂತೆ ಬಿಸಿಸಿಐ ಜೊತೆ ಚರ್ಚಿಸಿ ಮುಂಬೈನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಸಿಕ್ಸರ್ ಸಿಂಗ್ ತಮ್ಮ ಕ್ರಿಕೆಟ್ ಜೀವನದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಂಡು 19 ವರ್ಷದ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ.ಈ ವರೆಗೆ ಒಟ್ಟು 304 ಏಕದಿನ ಪಂದ್ಯಗಳನ್ನು ಆಡಿರುವ ಯುವಿ 8701 ರನ್ ಕಲೆಹಾಕಿದ್ದಾರೆ. ಇದರಲ್ಲಿ 52 ಅರ್ಧಶತಕ ಹಾಗೂ 14 ಶತಕಗಳು ಸೇರಿವೆ. ಗರಿಷ್ಠ ಸ್ಖೋರ್ 150 ಆಗಿದೆ. ಜೊತೆಗೆ 111 ವಿಕೆಟ್​ಗಳನ್ನು ಪಡೆದಿದ್ದಾರೆ.ಅಂತೆಯೆ 40 ಟೆಸ್ಟ್​ ಪಂದ್ಯಗಳನ್ನಾಡಿ 3277 ರನ್ ಕಲೆಹಾಕಿದ್ದಾರೆ. ಟಿ-20 ಪಂದ್ಯಗಳ ಪೈಕಿ 58 ಪಂದ್ಯಗಳಲ್ಲಿ 1177 ರನ್ ಬಾರಿಸಿದ್ದಾರೆ.

ಕೀನ್ಯಾ ತಂಡದ ವಿರುದ್ಧ 2000 ರಲ್ಲಿ ಅಂತರಾಷ್ಟ್ರೀ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಯುವಿ ತನ್ನ ಕೊನೆಯ ಪಂದ್ಯವನ್ನು ವೆಸ್ಟ್​ ಇಂಡೀಸ್ ವಿರುದ್ಧ 2017 ರಲ್ಲಿ ಆಡಿದ್ದಾರೆ.ಕ್ಯಾನ್ಸರ್​ನಿಂದ ಗುಣಮುಖರಾದ ಯುವರಾಜ್​ ಮತ್ತೆ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಮರಳಲಿದ್ದಾರೆ ಎನ್ನಲಾಗಿತ್ತು. ಆದರೆ, ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಹಾಗಾಗಿ ಯುವರಾಜ್​ ಸಿಂಗ್​ ವಿದೇಶದಲ್ಲಿ ನಡೆಯುವ ಟಿ-20 ಲೀಗ್​ಗಳಲ್ಲಿ ಪಾಲ್ಗೊಳ್ಳುವ ಆಲೋಚನೆಯಲ್ಲಿದ್ದಾರೆ. ಅಲ್ಲಿ ಸಿಗುವ ಅವಕಾಶ ಬಳಸಿಕೊಂಡು ತಮ್ಮ ವೃತ್ತಿ​ ಮುಂದುವರಿಸಲು ಅವರು ನಿರ್ಧರಿಸಿದ್ದಾರೆ.

ಯುವರಾಜ್​ ಸಿಂಗ್​ ಆಲ್​ರೌಂಡರ್​ ಆಗಿ ಭಾರತದ ತಂಡದಲ್ಲಿ ಮಿಂಚಿದ್ದರು. 2007ರ ಟಿ20 ವಿಶ್ವಕಪ್​ ಹಾಗೂ 2011ರ ವಿಶ್ವಕಪ್​ನಲ್ಲಿ ಆಡಿದ್ದ ಹಿರಿಮೆ ಯುವರಾಜ್​ ಅವರದ್ದು. ಆದರೆ, ಯುವರಾಜ್​ಸಿಂಗ್​ಗೆ ಕ್ಯಾನ್ಸರ್​ ಕಾಡಿತ್ತು. ವಿದೇಶದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಂದಿದ್ದರು. ಯುವರಾಜ್​ 2017ರಲ್ಲಿ ಭಾರತದ ಪರ ಕೊನೆಯದಾಗಿ ಬ್ಯಾಟ್​ ಬೀಸಿದ್ದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here