ಯುವರತ್ನ ಇದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಭಿನಯದ ಹೊಸ ಚಿತ್ರ. ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾದ ಮೇಲಂತೂ ಅದು ಪವರ್ ಸ್ಟಾರ್ ಅಭಿಮಾನಿಗಳಿಗೆ ಬಹಳ ಸಂತಸವನ್ನು ಹಾಗೂ ಹೊಸ ಸಿನಿಮಾದ ಬಗ್ಗೆ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ವಿಶೇವವಾಗಿ ಈ ಸಿನಿಮಾದಲ್ಲಿ ಪುನೀತ್ ಅವರು ಕಾಲೇಜು ಸ್ಟೂಡೆಂಟ್ ಆಗಿ ನಟನೆ ಮಾಡುತ್ತಿರುವುದು ಅಭಿಮಾನಿಗಳಿಗೆ ಮತ್ತಷ್ಟು ಖುಷಿ ನೀಡಿದೆ. ಕಾರಣ ಹಲವು ವರ್ಷಗಳ ನಂತರ ಅವರು ಕಾಲೇಜು ಹುಡುಗನ ಪಾತ್ರ ಮಾಡುತ್ತಿರುವುದು ಅವರ ಯುವ ಅಭಿಮಾನಿಗಳಿಗಂತೂ ದೊಡ್ಡ ಸಂಭ್ರಮದಂತೆ ಕಂಡಿದೆ. ನಟಸಾರ್ವಭೌಮನಾಗಿ ರಂಜಿಸಿದ್ದ ಅವರು ಕ್ರಿಸ್ ಮಸ್ ಗೆ ಯುವರತ್ನನಾಗಿ ಬೆಳ್ಳಿತೆರೆಯ ಮೇಲೆ ಹೊಳೆಯಲು ಸಿದ್ಧತೆಗಳು ನಡೆದಿದೆ.

ಅಂದರೆ ಪುನೀತ್ ಅಭಿಮಾನಿಗಳಿಗೆ ಕ್ರಿಸ್ ಮಸ್ ಜೊತೆಗೆ ಅವರ ಅಭಿಮಾನ ನಟನ ಚಿತ್ರ ಕೂಡಾ ಸಂಭ್ರಮವನ್ನು ದುಪ್ಪಟ್ಟು ಮಾಡಲಿದೆ. ಕಾಲೇಜ್ ಹಿನ್ನೆಲೆಯ ಚಿತ್ರವಾಗಿರುವುದರಿಂದ ಬಹಳ ಕಲರ್ ಫುಲ್ ಆಗಿ ಹಾಗೂ ನೈಜವಾಗಿ ಚಿತ್ರವನ್ನು ಮೂಡಿಸಲು ಚಿತ್ರ ತಂಡ ನಿರ್ಧರಿಸಿ, ಚಿತ್ರಕ್ಕೆ ಅಂದರೆ ಕಾಲೇಜ್ ದೃಶ್ಯಗಳಿಗಾಗಿ ಸಾವಿರ ಜನರ ಆಡಿಷನ್ ಮಾಡಿ ಅದರಲ್ಲಿ ನಾನೂರು ಜನರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಹತ್ತು ಶೆಡ್ಯೂಲ್ ಗಳಲ್ಲಿ ಚಿತ್ರವನ್ನು ಮುಗಿಸುವ ಯೋಜನೆಯಿರುವ ಚಿತ್ರತಂಡಕ್ಕೆ ಚಿತ್ರವನ್ನು ಕ್ರಿಸ್ ಮಸ್ ಗೆ ತೆರೆಗೆ ತರುವ ಯೋಜನೆ ಕೂಡಾ ಇದೆ.

ಈಗಾಗಲೇ ಚಿತ್ರದ ಚಿತ್ರೀಕರಣವನ್ನು ಬೆಂಗಳೂರು, ಮಂಗಳೂರು ಹಾಗೂ ಧಾರವಾಡದಲ್ಲಿ ಮೂರು ಹಂತದ ಚಿತ್ರೀಕರಣವನ್ನು ಮುಗಿಸಿದೆ. ಇನ್ನು ಜೂನ್ ನಿಂದ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಅಲ್ಲೇ ಕರ್ನಾಟಕ ಕಾಲೇಜಿನಲ್ಲಿ ನಾಲ್ಕನೇ ಹಂತದ ಚಿತ್ರೀಕರಣವನ್ನು ಮಾಡಲಾಗುವುದೆಂದು ಚಿತ್ರ ತಂಡ ತಿಳಿಸಿದೆ. ಪುನೀತ್ ಅವರ ಹೊಸ ಲುಕ್ಕನ್ನು ನಿರ್ದೇಶಕರು ಬಿಡುಗಡೆ ಮಾಡಿ ಅಭಿಮಾನಿಗಳ ದಿಲ್ ಖುಷ್ ಮಾಡಿದ್ದಾರೆ. ಇನ್ನು ಈ ಚಿತ್ರದಲ್ಲಿ ಸಾಯೆಷಾ ಸೈಗಲ್ ಪುನೀತ್ ಅವರ ಪಕ್ಕ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದಾರೆ. ದೊಡ್ಡ ಬಜೆಟ್ ನಲ್ಲಿ ನಿರ್ಮಾಣ ಆಗುತ್ತಿರುವ ಈ ಚಿತ್ರ ಈಗಾಗಲೇ ಒಂದು ಹೊಸ ನಿರೀಕ್ಷೆ ಹುಟ್ಟು ಹಾಕಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here