ನಾಳೆ (ಮಾರ್ಚ್ 17) ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಜನ್ಮದಿನ. ಜನ್ಮ ದಿನಕ್ಕೆ ಒಂದು ದಿನ ಮುಂಚಿತವಾಗಿಯೇ ಪುನೀತ್ ಅವರ ಅಭಿಮಾನಿಗಳಿಗೆ ಭರ್ಜರಿಯಾದ ಉಡುಗೊರೆಯೊಂದು ದೊರೆತಿದೆ. ‌ಏನು ಆ ಉಡುಗೊರೆ ಅನ್ನೋದಾದ್ರೆ ಅದು ಪುನೀತ್ ಅವರ ಹೊಸ ಸಿನಿಮಾ ಯುವರತ್ನ ಟೀಸರ್ ಬಿಡುಗಡೆಯಾಗಿದ್ದು, ಪವರ್ ಫುಲ್ ಡೈಲಾಗ್ ಗಳು ಅಭಿಮಾನಿಗಳ ಮೈಯಲ್ಲಿ ಮಿಂಚಿನ ಸಂಚಾರವನ್ನು ಉಂಟು ಮಾಡುತ್ತಿದ್ದು, ಟೀಸರ್ ಯೂಟ್ಯೂಬ್ ನಲ್ಲಿ ಬಿರುಗಾಳಿ ಎಬ್ಬಿಸುತ್ತಾ ಸಾಗಿದ್ದು, ಯುವರತ್ನನ ಖದರ್ ಜೋರಾಗೇ ಇದೆ.

ಗಂಡಸ್ತನ, ಚರ್ಬಿ, ಮೀಟರ್, ಮ್ಯಾಟರ್ ಇರೋನೊಬ್ಬ ಬೇಕು ಅಂತ ಒಂದು ಭರ್ಜರಿ ಮಾಸ್ ಡೈಲಾಗ್ ನಿಂದ ಪ್ರಾರಂಭ ಆಗೋ ಟೀಸರ್ ನಲ್ಲಿ ಪವರ್ ಫುಲ್ ಡೈಲಾಗ್ ಗಳೇ ಅಭಿಮಾನಿಗಳನ್ನು ಹುಚ್ಚೆಬ್ಬಿಸುತ್ತಿದೆ. ಸೀಟ್ ಗೆ ಹೊಡೆದಾಡೋನು ಡಾನ್ ಆದರೆ ಅದರ ಮೇಲೆ ಕೂರೋನು… ಎನ್ನುವ ಮತ್ತೊಂದು ಡೈಲಾಗ್ ಕೂಡಾ ಸಿಕ್ಕಾಪಟ್ಟೆ ಪವರ್ ಫುಲ್ ಆಗಿ ಮೂಡಿ ಬಂದಿದೆ. ಡೈಲಾಗ್ ಗಳಿಗೆ ತಕ್ಕ ಹಾಗೇ ಜೋಷ್ ನೀಡುವ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಕೂಡಾ ಮೈನವಿರೇಳುವಂತೆ ಮಾಡುತ್ತದೆ. ಖದರ್ ಇಲ್ದೇ ಇರೋ ಕಡೆ ನಮ್ ಹುಡ್ಗುರೋ ಓಡಾಡೋಲ್ಲ, ನಾವ್ ಇರ್ತೀವಾ? ಅನ್ನೋ ಪುನೀತ್ ರಾಜ್‌ಕುಮಾರ್ ಅವರ ಡೈಲಾಗ್ ಟೀಸರ್ ನ ಹೈಲೈಟ್ ಎನ್ನುವಂತಿದೆ.

ಟೀಸರ್ ನಲ್ಲಿ ಪುನೀತ್ ರಾಜ್‍ಕುಮಾರ್ ಪಕ್ಕಾ ಕಾಲೇಜ್ ಹುಡುಗನಾಗಿ ಮಿಂಚಿದ್ದಾರೆ. ನಾಯಕಿ ನೀವು ಅಣ್ಣಾವ್ರ ತರಾನೇ ಇದ್ದೀರಾ ಅಂದಾಗ ಥ್ಯಾಂಕ್ಸ್ ಹೇಳ್ತಾ ನನ್ನ ಅಣ್ಣ ಅನ್ಕೋಬೇಡಿ ಎನ್ನುವ ಡೈಲಾಗ್ ನಲ್ಲಿ ಹಾಸ್ಯ ಹಾಗೂ ತುಂಟಾಟ ಎರಡೂ ನಮಗೆ ಕಾಣುತ್ತದೆ. ಸಂತೋಷ್ ಆನಂದ್ ರಾಮ್ ನಿರ್ದೇಶನದ ಈ ಸಿನಿಮಾಕ್ಕೆ ವಿಜಯ್ ಕಿರಂಗದೂರ್ ಅವರು ನಿರ್ಮಾಪಕರಾಗಿದ್ದು, ಎಸ್. ತಮನ್ ಅವರು ಸಂಗೀತ ನಿರ್ದೇಶನ ನೀಡಿದ್ದಾರೆ. ಟೀಸರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲೇ ಲಕ್ಷಕ್ಕಿಂತ ಅಧಿಕ ಸಂಖ್ಯೆಯ ವೀಕ್ಷಣೆ ಆಗಿದ್ದು, ಅದು ಇನ್ನೂ ಮುಂದುವರೆದಿದೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here