ಪುನೀತ್ ರಾಜ್‍ಕುಮಾರ್ ಅವರ ಹೊಸ ಚಿತ್ರ ಯುವರತ್ನ ಟೀಸರ್ ಬಿಡುಗಡೆಯ ನಂತರ ಒಂದು ಸಂಚಲನವನ್ನು ಸೃಷ್ಟಿಸಿದ್ದು, ಅಪ್ಪು ಅವರು ಕಾಲೇಜು ವಿದ್ಯಾರ್ಥಿಯಾಗಿ ಯುವ ಜನರನ್ನು ರಂಜಿಸಲು ಸಿದ್ಧರಾಗಿದ್ದಾರೆ. ರಗ್ಬಿ ಆಡುತ್ತಿರುವ ದೃಶ್ಯಗಳ ಟೀಸರ್ ಅಭಿಮಾನಿಗಳಿಗೆ ಸಖತ್ ಜೋಷ್ ತುಂಬಿದ್ದು, ಚಿತ್ರದ‌ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಮಾದ್ಯಮಗಳ‌ ಮುಂದೆ ಸಿನಿಮಾದ ವಿಶೇಷತೆಗಳನ್ನು‌‌ ತಿಳಿಸಿದ್ದಾರೆ. ಸಂತೋಷ್ ರಾಮ್ ಅವರು ಮಾತನಾಡುತ್ತಾ ಶಿವಣ್ಣ ಮತ್ತು ಅಪ್ಪು ಸರ್ ಇಬ್ಬರೂ‌ ತಮ್ಮ‌ ವಯಸ್ಸಿಗಿಂತಲೂ ಯಂಗ್ ಆಗಿದ್ದು, ಪುನೀತ್ ಅವರು ಕಾಲೇಜು ಹುಡುಗನ ಪಾತ್ರಕ್ಕಾಗಿ ಅತ್ಯುತ್ತಮವಾಗಿ ತಮ್ಮನ್ನು‌ ಫಿಟ್ ಆಗಿ ಸಿದ್ಧ ಮಾಡಿಕೊಂಡು ಬಂದರು ಎಂದು ಹೇಳಿದ್ದಾರೆ.

ಈ ಸಿನಿಮಾ ಶಿಕ್ಷಣದಲ್ಲಿ ನಡೆಯುತ್ತಿರುವ ವ್ಯಾಪಾರವನ್ನು ಅಂದರೆ ಎಜುಕೇಶನ್ ಮಾಫಿಯಾ ಬಗ್ಗೆ ಆಗಿದ್ದು ಅದನ್ನು ವಿವಿಧ ಆಯಾಮಗಳಲ್ಲಿ ತೋರಿಸಲಾಗಿದೆ ಎಂದಿದ್ದಾರೆ. ಚಿತ್ರದಲ್ಲಿ ನಾಲ್ಕು‌ ಹಾಡುಗಳಿದ್ದು ಅಪ್ಪು ಅವರು ನಾಲ್ಕರಲ್ಲಿ ಕೂಡಾ‌ ಭರ್ಜರಿ ಡಾನ್ಸ್ ಮಾಡಿದ್ದಾರೆ‌ ಎಂದಿದ್ದಾರೆ. ಅಲ್ಲದೆ‌ ಈ ಸಿನಿಮಾದಲ್ಲಿ ಡಾಲಿ ಧನಂಜಯ್ ಅವರು ವಿಲನ್‌ ಪಾತ್ರದಲ್ಲಿ ಇದ್ದು, ಅವರಿಗೂ ಹಾಗೂ ಪುನೀತ್ ಅವರಿಗೂ ನಡುವಿನ ದೃಶ್ಯಗಳು ಸಖತ್ ಸದ್ದು ಮಾಡುವಂತೆ ಇದೆ ಎಂದು ಅವರು ಹೇಳಿದ್ದಾರೆ.

ಪ್ಯಾನ್ ಇಂಡಿಯಾ ಸಿನಿಮಾ‌ ಆಗುವ ಎಲ್ಲಾ‌ ಅರ್ಹತೆಗಳನ್ನು ಈ ಸಿನಿಮಾ ಹೊಂದಿದ್ದರೂ ಕೂಡಾ‌ ಸಿನಿಮಾವನ್ನು‌‌ ರಾಜ್ಯಾದ್ಯಂತ, ದೇಶಾದ್ಯಂತ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೂಡಾ ಕನ್ನಡದಲ್ಲೇ ಬಿಡುಗಡೆ ಮಾಡುತ್ತಿದ್ದು ಎಲ್ಲರೂ ಕನ್ನಡದಲ್ಲೇ ಸಿನಿಮಾವನ್ನು ನೋಡಬೇಕು ಎಂದಿರುವ ನಿರ್ದೇಶಕ ಸಂತೊಷ್ ರಾಮ್ ಅವರು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು ಎಲ್ಲರೂ ಈ‌ ಸಿನಿಮಾವನ್ನು ಮೆಚ್ಚಿ ಯಶಸ್ಸು ಗಳಿಸಲು ಜೊತೆಯಾಗುವರು ಎಂದು ನಿರ್ದೇಶಕರು ವಿಶ್ವಾಸವನ್ನು ವ್ಯಕ್ತ ಪಡಿಸಿದ್ದಾರೆ. ಯುವರತ್ನ ಎಲ್ಲೆಡೆ ಕನ್ನಡದಲ್ಲಿ‌ ಮಾತ್ರ ಬಿಡುಗಡೆ ಆಗಲಿದೆ ಎಂಬುದು ಒಂದು ವಿಶೇಷ ಎನಿಸಿದೆ.

ಇದನ್ನೂ ನೋಡಿ……. 

ಒಂದೊಂದು ಡೈಲಾಗ್ ಗಳಿಗೂ ಫ್ಯಾನ್ಸ್ ಶಿಳ್ಳೆ ಹೊಡೆದು ಕಾಲರ್ ಮೇಲೆ ಎತ್ತುತ್ತಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here