ಹೊಸ ವರ್ಷದ ಪ್ರಯುಕ್ತ ಇಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಯುವರತ್ನ ಚಿತ್ರದ ವಿಶೇಷ ಪೋಸ್ಟರ್ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಕತ್ ಸಂಚಲನ ಸೃಷ್ಟಿಸುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಎರಡು ಬ್ಯಾಕ್ ಟು ಬ್ಯಾಕ್ ಇಂಡಸ್ಟ್ರಿ ಹಿಟ್ ಸಿನಿಮಾ ನಿರ್ದೇಶನ ಮಾಡಿ ಇದೀಗ ಯುವರತ್ನ ಮೂಲಕ ಮತ್ತೊಂದು ಬಿಗ್ ಹಿಟ್ ಕೊಡಲು ಸಿದ್ದವಾಗಿರುವ ಸಂತೋಷ್ ಆನಂದರಾಮ್ ನಿರ್ದೇಶನ ಮಾಡುತ್ತಿರುವ ಮೂರನೇ ಸಿನಿಮಾ ಯುವರತ್ನ.ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ

ನಿರ್ಮಾಣ ಆಗುತ್ತಿರುವ ಯುವರತ್ನ ಚಿತ್ರದ ಬಗ್ಗೆ ಈಗಾಗಲೇ ಅಭಿಮಾನಿಗಳಲ್ಲಿ ಸಾಕಷ್ಟು ಕಾತುರ ಹೆಚ್ಚಾಗಿದ್ದು ಈ ಚಿತ್ರದ ಬಗ್ಗೆ ಅಭಿಮಾನಿಗಳು ಕಾದು ಕುಳಿತಿದ್ದಾರೆ.ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟು ಮಾಡುವಂತಿದೆ ಇಂದು ಬಿಡುಗಡೆ ಆಗಿರುವ ಯುವರತ್ನ ಚಿತ್ರದ ಹೊಸ ಪೋಸ್ಟರ್. ಸಕತ್ ಯಂಗ್ ಲುಕ್ ನಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕಾಣಿಸಿಕೊಂಡಿದ್ದು ತಮ್ಮ ಬೆನ್ನ ಮೇಲೆ ಮಾನವನ

ಅಸ್ತಿಪಂಜರ ಹೊತ್ತುಕೊಂಡಿರುವುದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ. ಪುನೀತ್ ರಾಜಕುಮಾರ್ ಹಿಂಬದಿಯಲ್ಲಿ ಡೈನೋಸಾರ್ ಅಸ್ತಿಪಂಜರ ಇರುವ ಚಿತ್ರ ಇದ್ದು ಯುವರತ್ನ ಪೋಸ್ಟರ್ ನೋಡುಗರಲ್ಲಿ ರೋಮಾಂಚನ ಸೃಷ್ಟಿ ಮಾಡಿದೆ.ಇನ್ನು ಟ್ವಿಟ್ಟರ್ ನಲ್ಲಿಯೂ ಯುವರತ್ನ ಪೋಸ್ಟರ್ ನಂಬರ್ ಒನ್ ಟ್ರೆಂಡ್ ಆಗಿದೆ ಎಂಬುದು ವಿಶೇಷ .

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here