ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಬಹುನಿರೀಕ್ಷೆಯ ಯುವರತ್ನ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಖ್ಯಾತ ನಿರ್ದೇಶಕ ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಿರುವ ಯುವರತ್ನ ಚಿತ್ರದ ಟೀಸರ್ ನೋಡಿದ ಪುನೀತ್ ರಾಜಕುಮಾರ್ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಟೀಸರ್ ಬಿಡುಗಡೆಯಾದ ಕೆಲವೇ ಘಂಟೆಗಳಲ್ಲಿ ಮಿಲಿಯನ್ ಗೂ ಅಧಿಕ ವಿವ್ಸ್ ಪಡೆದು ಲಕ್ಷಾಂತರ ಲೈಕ್ಸ್ ಪಡೆದಿದೆ. ಟೀಸರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸಂತೋಷ್ ಆನಂದ್ ರಾಮ್ ಅವರು ಯುವರತ್ನ ಚಿತ್ರದ ಬಗ್ಗೆ ಕೆಲವು ವಿಶೇಷ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಯುವರತ್ನ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಅವರದ್ದು 3 ವಿಭಿನ್ನ ಶೇಡ್ ಗಳಿದ್ದು ಅದರಲ್ಲಿ ಒಂದು ಶೇಡ್ ಮಾತ್ರ ನೀವು ಈಗ ನೋಡುತ್ತಿದ್ದೀರಾ ಇನ್ನು ಎರಡು ಶೇಡ್ ಗಳನ್ನು ಚಿತ್ರದಲ್ಲಿ ಕಾಣಬಹುದು ಎಂದು ಸಂತೋಷ್ ಆನಂದ್ ರಾಮ್ ತಿಳಿಸಿದರು. ಇನ್ನು ಯುವರತ್ನ ಚಿತ್ರದಲ್ಲಿ ಬರುವ ಒಂದೊಂದು ಡೈಲಾಗ್ ಗಳಿಗೂ ಅಭಿಮಾನಿಗಳು ಶಿಳ್ಳೆ ಹೊಡೆದು ಕಾಲರ್ ಮೇಲೆ ಎತ್ತಬೇಕು ಅಂತಹ ಡೈಲಾಗ್ಗಳು

ಯುವರತ್ನ ಚಿತ್ರದಲ್ಲಿದ್ದು, ಅಭಿಮಾನಿಗಳಿಗೆ ಬೇಕಾದ ಮನರಂಜನೆ ಸಂಪೂರ್ಣವಾಗಿ ನೀಡುತ್ತೇವೆ ಎಂದು ನಿರ್ದೇಶಕ ಸಂತೋಷ್ ಆನಂದ್ ರಾಮ್ ತಿಳಿಸಿದರು.ಯುವರತ್ನ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಮತ್ತು ಧನಂಜಯ ಅವರ ಸನ್ನಿವೇಶಗಳು ನೋಡುಗರಿಗೆ ಥ್ರಿಲ್ ಕೊಡಲಿದ್ದು ಧನಂಜಯ್ ಯುವರತ್ನ ಬಳಿಕ ಡಾಲಿ ಥರಹ ಮತ್ತೊಂದು ಹೆಸರಿನಿಂದ ಕರೆಸಿಕೊಳ್ಳುತ್ತಾರೆ ಎಂದು ಸಂತೋಷ್ ಆನಂದ್ ರಾಮ್ ತಿಳಿಸಿದರು.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here