ಪುಲ್ವಾಮ ದುರಂತದಲ್ಲಿ ದೇಶದ ನಲವತ್ತಕ್ಕೂ ಹೆಚ್ಚಿನ ವೀರ ಯೋಧರು ಅಮರರಾಗಿದ್ದಾರೆ. ಯೋಧರನ್ನು ಕಳೆದುಕೊಂಡ ಯೋಧರ ಕುಟುಂಬಕ್ಕೆ ಭರಿಸಲಾಗದ ನೋವು ಸಂಭವಿಸಿದೆ. ಆಯಾ ರಾಜ್ಯಗಳ ಸರ್ಕಾರ ಮತ್ತು ಕೇಂದ್ರ ಸರ್ಕಾರವು ಮತ್ತು ಉದ್ಯಮಿಗಳು ಮೃತ ಯೋಧರ ಕುಟುಂಬಕ್ಕೆ ಹಣದ ರೂಪದಲ್ಲಿ ನೆರವು ನೀಡುತ್ತಿದ್ದಾರೆ. ಇದೀಗ  ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ 49 ಕುಟುಂಬಗಳಿಗೂ ಹಲವಾರು ಪ್ರಸಿದ್ಧ ನಟ ನಟಿಯರು ಸೇರಿದಂತೆ ಅನೇಕ ಜನಸಾಮನ್ಯರು ನೆರವು ನೀಡಲು ಮುಂದಾಗಿದ್ದಾರೆ. ವೀರ ಸೇನಾನಿಗಳ ಕುಟುಂಬಕ್ಕೆ ಒಂದಲ್ಲ ಒಂದು ರೀತಿ ನೆರವು ನೀಡುವುದು ಈಗ ಭಾರತೀಯರಾದ ನಮ್ಮೆಲ್ಲರ ಕರ್ತವ್ಯ.

ಇದೀಗ ಪುಲ್ವಾಮ ದುರಂತದಲ್ಲಿ ಮಡಿದಿರುವ ಭಾರತದ ವೀರ ಯೋಧರ ಕುಟುಂಬಕ್ಕೆ ನೆರವಿನ ಪೂರ ಹರಿದುಬರುತ್ತಿರುವ ಎಲ್ಲರಿಗೂ ಖುಷಿ ನೀಡುತ್ತದೆ.ಪುಲ್ವಾಮಾದಲ್ಲಿ ನಡೆದ ಉಗ್ರರ ಪೈಶಾಚಿಕ ಕೃತ್ಯದಲ್ಲಿ ಹುತಾತ್ಮರಾದ ಮಂಡ್ಯದ ವೀರಯೋಧ ಗುರು ಕುಟುಂಬದವರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಜಮೀರ್ ಅಹಮದ್ ಖಾನ್ ಅವರು ಇಪ್ಪತ್ತು ಲಕ್ಷಗಳ ದೊಡ್ಡ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.ಹುತಾತ್ಮನ ಕುಟುಂಬಕ್ಕೆ ವಕ್ಫ್​​ ಬೋರ್ಡ್​​ ಹಾಗೂ ಜಮೀರ್ ಅಹ್ಮದ್ ಖಾನ್ ಒಡೆತನದ ನ್ಯಾಷನಲ್ ಟ್ರಾವೆಲ್ಸ್​ ತಲಾ 10 ಲಕ್ಷ ರೂಪಾಯಿ ಹಣ ನೀಡಿದ್ದು, ಒಟ್ಟು 20 ಲಕ್ಷ ರೂಪಾಯಿ ಚೆಕ್​ ಅನ್ನು ಜಮೀರ್ ಅಹ್ಮದ್ ಖಾನ್ ಗುರು ಕುಟುಂಬಕ್ಕೆ ಹಸ್ತಾಂತರಿಸಿದರು.

ಇನ್ನು ಇದಿಷ್ಟೇ ಅಲ್ಲದೇ ಎಂಎಲ್‌ಸಿ ರಿಜ್ವಾನ್ ಅಹ್ಮದ್​​ ₹2.5 ಲಕ್ಷ, ಜಮೀರ್ ಆಪ್ತ ಬಾವ1 ಲಕ್ಷ, ಶಾಸಕ ಹ್ಯಾರಿಸ್‌ ₹2 ಲಕ್ಷ ಪರಿಹಾರ ನೀಡಿದರು.ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಜಮೀರ್ ಅಹ್ಮದ್​​, ವಕ್ಫ್ ಕಮಿಟಿಯಿಂದ ₹10 ಲಕ್ಷ ಹಾಗೂ ನಮ್ಮ ನ್ಯಾಷನಲ್ ಟ್ರಾನ್ಸ್ ಪೋರ್ಟ್‌ನಿಂದ ಗುರು ತಾಯಿ ಹೆಸರಿಗೆ ₹10 ಲಕ್ಷ ಸಹಾಯ ಮಾಡಲಾಗಿದೆ. ನಮ್ಮ ಬಾವ ಅವರು ತಾಯಿ ಹೆಸರಿಗೆ 1 ಲಕ್ಷ ಪರಿಹಾರ ಕೊಟ್ಟಿದ್ದಾರೆ. ರಿಜ್ವಾನ್ ಹರ್ಷದ್ ಅವರು ಗುರು ತಾಯಿ ಮತ್ತು ಪತ್ನಿ ಹೆಸರಿಗೆ ತಲಾ ಎರಡೂವರೆ ಲಕ್ಷ ಚೆಕ್ ನೀಡಿದ್ದಾರೆ. ಗುರು ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ. ನಾವು ಏನೇ ಕೊಟ್ಟರೂ ಮಗನನ್ನು ಕೊಡಲು ಸಾಧ್ಯವಿಲ್ಲ. ನಮಗೂ ದುಃಖ ಆಗುತ್ತೆ. ನಾನು ಗುರು ಕುಟುಂಬಕ್ಕೆ ಸಾಂತ್ವನ ಹೇಳಲು ಬಂದಿದ್ದೇನೆ. ಇಲ್ಲಿ ರಾಜಕೀಯಕ್ಕೆ ಸಂಬಂಧಿಸಿದಂತೆ ಮಾತನಾಡಲ್ಲ ಎಂದು ಮಾಧ್ಯಮದವರ ಪ್ರಶ್ನೆಗೆ ಕೈ ಮುಗಿದು ಮನವಿ ಮಾಡಿಕೊಂಡರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here