ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಇಳಿಯುವ ಲಕ್ಷಣಗಳಂತೂ ಕಾಣುತ್ತಿಲ್ಲ. ಅದರ ಬದಲಾಗಿ ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದೀಗ ಬೆಂಗಳೂರು ನಗರದ ರಾಯಪುರ ವಾರ್ಡ್​ನಲ್ಲಿ ವಾಸವಾಗಿರುವ ಸುಮಾರು 37 ಮಂದಿ ಪೌರ ಕಾರ್ಮಿಕರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ. ಇಲ್ಲಿನಪೌರ ಕಾರ್ಮಿಕರಿಹೆ ನಡೆಸಿದ ರ್ಯಾಂಡಮ್ ಟೆಸ್ಟ್ ನಲ್ಲಿ ಎಲ್ಲರಲ್ಲೂ ಕೂಡಾ ಸೋಂಕಿನ ಲಕ್ಷಣ ರಹಿತವಾಗಿದ್ದರೂ, ಸೋಂಕಿಗೆ ಒಳಗಾಗಿರುವುದು ಮಾತ್ರ ದೃಢವಾಗಿದೆ.‌

ಸೋಂಕು ದೃಢಪಟ್ಟಿರುವವರನ್ನು ಈಗಾಗಲೇ BIEC ಕೋವಿಡ್ ಕೇರ್ ಸೆಂಟರ್ ಗೆ ಕಳುಹಿಸಲಾಗಿದ್ದು, ಇನ್ನು ಈ ಪೌರ ಕಾರ್ಮಿಕರ ಕುಟುಂಬಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಹಾಗೂ ಸಮಸ್ಯೆಗಳು ಎದುರಾಗದಂತೆ ನೋಡಿಕೊಳ್ಳಲು ತಾನು ಸಹಾಯ ಮಾಡುವುದಾಗಿ ನೆರವಿಗೆ ಬಂದಿರುವ ಶಾಸಕ ಜಮೀರ್ ಅಹ್ಮದ್ ಅವರು ಈ ಕುಟುಂಬಗಳಿಗೆ ಅಗತ್ಯ ಇರುವ ಪಡಿತರದ ವ್ಯವಸ್ಥೆಯನ್ನು ಮಾಡುವುದಾಗಿ ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here