ಬಹುಕೋಟಿ ವಂಚನೆಯಿಂದ ಕುಖ್ಯಾತಿಯಾದ ಐಎಂಎ ಜ್ಯುವೆಲ್ಸ್ ನ ಪ್ರಕರಣದಲ್ಲಿ ಸಚಿವ ಜಮೀರ್ ಅಹಮದ್ ಅವರ ವಿಚಾರಣೆಯನ್ನು ಇಂದು ಮಾಡಲಾಗುತ್ತಿದೆ. ಅವರು ಇಂದು ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗಾಗಿ ಹಾಜರಾಗಬೇಕಿದೆ. ರಿಚ್ಮಂಡ್ ಟೌನ್ ನ ಸರ್ಫಂಟೈನ್ ರಸ್ತೆಯಲ್ಲಿರುವ ನಿವೇಶವೊಂದನ್ನು ಜಮೀರ್ ಅಹ್ಮದ್ ಅವರು ಐಎಂಎ ಮಾಲಿಕನಾದ ಮನ್ಸೂರ್ ಖಾನ್ ಗೆ ಮಾರಾಟ ಮಾಡಿದ್ದರು‌.‌ ಈ ಸಂಬಂಧ ಅವರ ನಡುವೆ ಪರಿಚಯ ಹಾಗೂ ವ್ಯವಹಾರ ನಡೆದಿರುವ ಹಿನ್ನೆಲೆಯಲ್ಲಿ ಸಚಿವರನ್ನು ವಿಚಾರಣೆ ಮಾಡಲು ಮುಂದಾಗಿದೆ ಇಡಿ‌.

ಇ.ಡಿ. ಅಧಿಕಾರಿಗಳು ಸಚಿವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಜುಲೈ 5 ರಂದು ತಾವೇ ಖುದ್ದಾಗಿ ಹಾಜರಾಗಿ ಐಎಂಎ ಆರೋಪಿಯಾಗಿರುವ ಮನ್ಸೂರ್ ಖಾನ್ ಜೊತೆ ನಡೆಸಿರುವ ನಿವೇಶನದ ವ್ಯವಹಾರವನ್ನು ಕುರಿತಾದ ಎಲ್ಲಾ ದಾಖಲೆಗಳನ್ನು, ಮಾರಾಟ ಸಂಬಂಧಿ ಮಾಹಿತಿಯನ್ನು ಒದಗಿಸುವಂತೆ ಜಾರಿ ನಿರ್ದೇಶನಾಲಯ ನೋಟೀಸ್ ಜಾರಿ ಮಾಡಿತ್ತು. ಈ ನೋಟಿಸನ್ನು ಕಳೆದ ವಾರವೇ ಇ.ಡಿ. ಅಧಿಕಾರಿಗಳು ಸಚಿವರ ಮನೆಗೆ ತೆರಳಿ ನೀಡಿ ಬಂದಿದ್ದರು.

ನೋಟಿಸಿಗೆ ಉತ್ತರ ನೀಡಿದ ಸಚಿವರು ತಾನು ನಿವೇಶನವನ್ನು ಕಾನೂನು ಪ್ರಕಾರವಾಗಿಯೇ ಮಾರಾಟ ಮಾಡಿರುವುದಾಗಿ, ಅದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ನೀಡಿ ವಿವರಣೆ ನೀಡುವುದಾಗಿ ಹೇಳಿದ್ದಾರೆ. ಇಂದು ಬೆಳಿಗ್ಗೆ ಹನ್ನೊಂದರ ವೇಳೆಗೆ ಸಚಿವರು ವಿಚಾರಣೆಗಾಗಿ ಶಾಂತಿ ನಗರದಲ್ಲಿರುವ ಇ.ಡಿ ಕಛೇರಿಗೆ ಹಾಜರಾಗಲಿದ್ದಾರೆ ಎನ್ನಲಾಗಿದೆ. ವಿಚಾರಣೆಯಲ್ಲಿ ಅವರು ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here