ನಿನ್ನೆ ಸಾದಿಕ್ ನಗರದಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ನಡೆದ ಹಲ್ಲೆಗೆ ರಾಜ್ಯವ್ಯಾಪಿ ಖಂಡನೆ ವ್ಯಕ್ತವಾಗಿದೆ. ವಿಷಯ ಸೂಕ್ಷ್ಮವಾದುದು, ಅದರ ಬಗ್ಗೆ ವ್ಯಾಪಕವಾಗಿ ಚರ್ಚೆಯು ನಡೆಯುವಾಗಲೇ ಇದೇ ವಿಷಯ ಶುಕ್ರವಾರ ಹೊಸ ಟ್ವಿಸ್ಟ್ ಪಡೆದುಕೊಂಡಿದೆ. ಈ ವಿಷಯವಾಗಿ ರಾಜ್ಯ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಅವರು ಪ್ರಚೋದನಾಕಾರಿ ವರ್ತನೆಯನ್ನು ತೋರಿದ್ದು, ಆಶಾ ಕಾರ್ಯಕರ್ತೆಯರ ಮೇಲಿನ ಹಲ್ಲೆಯನ್ನು ಮತ್ತು ಹಲ್ಲೆಕೋರರನ್ನು ಅವರು ಸಮರ್ಥನೆ ಮಾಡಿಕೊಳ್ಳುವ ಮೂಲಕ ಅಸಮಾಧಾನಕ್ಕೆ ಕಾರಣವುಂಟು ಮಾಡಿದ್ದಾರೆ.

 

ಕಾಂಗ್ರೆಸ್‌ ಶಾಸಕರು ಆಶಾ ಕಾರ್ಯಕರ್ತೆಯರು ಕೊರೊನಾ ಸಂಭಂದಿಸಿದಂತೆ ಮಾಹಿತಿಯನ್ನು ಕಲೆ ಹಾಕಲು ರಸ್ತೆಗಿಳಿದಿರುವ ಮಾಹಿತಿಯೇ ತನಗೆ ಗೊತ್ತಿಲ್ಲ ಎಂಬಂತೆ ಮಾತನಾಡಿದ್ದಾರೆ. ಚುನಾಯಿತ ಪ್ರತಿನಿಧಿ ಆಗಿರುವ ಅವರು ರಾಜ್ಯದಲ್ಲಿ ಪ್ರಚಲಿತಗಳ ಬಗ್ಗೆ ಸುಳಿವೇ ತನಗಿಲ್ಲ ಎಂಬಂತೆ ಮಾತನಾಡಿದ್ದು, ಸರ್ಕಾರ ಆಶಾ ಕಾರ್ಯಕರ್ತೆಯರಿಗೆ ಕೊರೊನಾ ಬಗ್ಗೆ ಮಾಹಿತಿ ಕಲೆ ಹಾಕಲು, ಜನರಲ್ಲಿ ಜಾಗೃತಿ ಮೂಡಿಸಲು ಅನುಮತಿ ನೀಡಿರುವುದು ತನಗೆ ಗೊತ್ತಿಲ್ಲ ಎನ್ನುವಂತೆ ಮಾತನಾಡಿರುವ ಅವರು, ಸರ್ಕಾರ ಇದಕ್ಕೆ ಅನುಮತಿ ನೀಡಿದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.

ಮೊದಲು ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆಯಾದಾಗ ನಾನು ಅದನ್ನು ಖಂಡಿಸಿದ್ದೆ. ಆದರೆ ಸ್ಥಳಕ್ಕೆ ಹೋದ ಮೇಲೆ ನನಗೆ ಅಲ್ಲಿನ ವಾಸ್ತವದ ಅರಿವು ಆಗಿದೆ. ಆಶಾ ಕಾರ್ಯಕರ್ತೆಯರು ಎನ್.ಆರ್.ಸಿ. ಕುರಿತಾಗಿ ಮಾಹಿತಿಯನ್ನು ಕೇಳಿದ್ದಾರೆ. ಅದಕ್ಕೆ ಇಂತಹ ಪರಿಸ್ಥಿತಿ ಉದ್ಭವವಾಗಿದೆ ಎಂದು ಆಶಾ ಕಾರ್ಯಕರ್ತೆಯರ ಮೇಲೆ ನಡೆದ ಹಲ್ಲೆಗೆ ಸಮರ್ಥನೆಯನ್ನು ಅವರು ನೀಡಿದ್ದಾರೆ. ಹೀಗೆ ಹೇಳಿಕೆ ಬದಲಿಸಿರುವ ಜಮೀರ್ ಅಹ್ಮದ್ ಅವರ ನಡೆ ವಿಚಿತ್ರ ಎನಿಸಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here