ಬಿಜೆಪಿ ಶಾಸಕಿಯಾದ ಶೋಭಾ ಕರಂದ್ಲಾಜೆ ಅವರು ಕಾಂಗ್ರೆಸ್ ನ ಜಮೀರ್ ಅಹ್ಮದ್ ವಿರುದ್ಧ ತೀವ್ರ ಅಸಮಾಧಾನವನ್ನು ಹೊರಹಾಕಿದ್ದಾರೆ‌ ಹಾಗೂ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜಮೀರ್ ಅಹ್ಮದ್ ಆಗಾಗ ನೀಡುವ ಹೇಳಿಕೆಗಳ ಬಗ್ಗೆ ಕಿಡಿ ಕಾರಿರುವ ಶೋಭಾ ಕರಂದ್ಲಾಜೆ ಅವರು ಜಮೀರ್ ಅಹ್ಮದ್ ಗೆ ತಲೆಕೆಟ್ಟಿದೆ ಮೊದಲು ಅವರನ್ನು ನಿಮ್ಹಾನ್ಸ್ ಗೆ ಸೇರಿಸಿ ಎಂದಿದ್ದಾರೆ. ಅಲ್ಲದೆ ಅವರು ನೀಡುವ ಹೇಳಿಕೆಗಳ ಬಗ್ಗೆ ಪರೋಕ್ಷವಾಗಿ ಶೋಭಾ ಅವರು ಆ ಮನುಷ್ಯ ಏನೇನೋ ಮಾತಾಡುತ್ತಾನೆ, ಏನು ಮಾತನಾಡುತ್ತೇನೆ ಎಂದು ಅವನಿಗೇ ಗೊತ್ತಿಲ್ಲ ಎಂದು ಏಕವಚನದಲ್ಲೇ ಟೀಕೆ ಮಾಡಿದ್ದಾರೆ.

ಜಮೀರ್ ಅಹ್ಮದ್ ಅವರು ಯಡಿಯೂರಪ್ಪನವರು ಮುಖ್ಯಮಂತ್ರಿ ಆದರೆ ನಾನು ವಾಚ್ ಮ್ಯಾನ್ ಆಗ್ತೀನಿ ಎಂಬುವ ಹೇಳಿಕೆಯೊಂದನ್ನು ಮಾದ್ಯಮಗಳ ಮುಂದೆ ನೀಡಿದ್ದರು. ಅವರ ಈ ಹೇಳಿಕೆಗೆ ಕೆಂಡಾಮಂಡಲವಾಗಿರುವ ಉಡುಪಿ-ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ  ಶೋಭಾ ಕರಂದ್ಲಾಜೆ ಜಮೀರ್ ಅಹ್ಮದ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಲಬುರಗಿಯ ಚಿಮ್ಮನಚೋಡದಲ್ಲಿ ಮಾಧ್ಯಮಗಳ ಮುಂದೆ ಸೋಮವಾರ ಮಾತನಾಡಿದ ಶೋಭಾ ಅವರು ಈ ಹಿಂದೆ ಜಮೀರ್ ಅಹ್ಮದ್ ನೀಡಿದ್ದ ಹೇಳಿಕೆಗಳನ್ನು ಒಮ್ಮೆ ಎಲ್ಲರ ಗಮನಕ್ಕೆ ತಂದಿದ್ದಾರೆ.

ಹಿಂದೊಮ್ಮೆ ಹೆಚ್​ಡಿ ಕುಮಾರಸ್ವಾಮಿ ಅವರು ಸಿಎಂ  ಆದರೆ ತನ್ನ ತಲೆಕಡೆದುಕೊಳ್ಳುವೆ ಅಂತ ಹೇಳಿದ್ದ, ಆನಂತರ ಒಮ್ಮೆ ತಲೆ ಬೋಳಿಸ್ಕೊತೀನಿ ಅಂತಾನೂ ಅಂದಿದ್ದ. ಅದೆಲ್ಲ ಆದ ಮೇಲೆ ಈಗ ಯಡಿಯೂರಪ್ಪ ಮುಖ್ಯಮಂತ್ರಿ ಆದರೆ ವಾಚ್ ಮ್ಯಾನ್ ಆಗ್ತೀನಿ ಅಂತಾನೆ. ಅವನ ತಲೆ ಸರಿಯಿಲ್ಲ ಹೀಗಾಗಿ ಮೊದಲು ನಿಮ್ಹಾನ್ಸ್ ಗೆ ಸೇರಿಸಿ ಎಂದು  ಶೋಭಾ ಕರಂದ್ಲಾಜೆ ತೀವ್ರವಾದ ಸಿಟ್ಟನ್ನು ತೋರಿಸಿಕೊಂಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here