
ಇಂದು ಮಕ್ಕಳ ದಿನಾಚರಣೆ. ಅಂದರೆ ಚಾಚಾ ನೆಹರು ಅವರ ಹುಟ್ಟಿದ ಹಬ್ಬ. ನಮ್ಮ ದೇಶದಲ್ಲಿ ಪಂಡಿತ್ ಜವಹರ್ ಲಾಲ್ ನೆಹರೂ ಅವರ ಹುಟ್ಟಿದ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಇಂದು ದೇಶದ ವಿವಿಧೆಡೆ ಶಾಲಾ ಕಾಲೇಜುಗಳಲ್ಲಿ ಈ ದಿನವನ್ನು ಬಹಳ ಸಂಭ್ರಮ ಸಂತೋಷದಿಂದ ಆಚರಿಸಲಾಗುತ್ತದೆ. ಇದೇ ಹಿನ್ನೆಲೆಯಲ್ಲಿ ಈಗಾಗಲೇ ಕಿರುತೆರೆಯ ನಂಬರ್ ಒನ್ ಚಾನೆಲ್ ಎಂಬ ಹೆಗ್ಗಳಿಕೆ ಪಡೆದಿರುವ ಜೀ ಕನ್ನಡ ವಾಹಿನಿಯು, ಮಕ್ಕಳಿಗಾಗಿ ಒಂದು ಸೃಜನಶೀಲ ಹಾಗೂ ಅವರ ಪ್ರತಿಭೆಗೆ ಪ್ರೋತ್ಸಾಹ ನೀಡಿರುವ ಕಾರ್ಯಕ್ರಮವೊಂದರ ವಿಡಿಯೋವನ್ನು ಅಪ್ಲೋಡ್ ಮಾಡಿದೆ.
ಜೀ ಕನ್ನಡ ಮಕ್ಕಳ ದಿನಾಚರಣೆ ಅಂಗವಾಗಿ ಮಂಡ್ಯ ಮತ್ತು ಗದಗದ ಸರ್ಕಾರಿ ಶಾಲೆಗಳಿಗೆ ಜೀ ವಾಹಿನಿಯ ಪ್ರತಿಭಾವಂತರಾದ ಮನು, ಶ್ರೀ ರಾಮ್ ಖಾಸಿಂ, ಸೃಜನ್ ಪಟೇಲ್ ,ಮಂಥನ್, ಸಂಗೀತವ್ವ ಹಾಜರಿದ್ದರು. ಜೀ ಕನ್ನಡ ಮಕ್ಕಳಿಗಾಗಿ “ಬಣ್ಣಿಸು ಬಯಸಿದ ಚಿತ್ರ ಬರೆಯೋಣ” ಎನ್ನುವ ಚಿತ್ರ ಬರೆಯುವ ಸ್ಪರ್ಧೆಯನ್ನು ಏರ್ಪಡಿಸಿ, ಸರ್ಕಾರಿ ಶಾಲೆಯ ಮಕ್ಕಳೊಂದಿಗೆ ಅರ್ಥಪೂರ್ಣವಾದ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗಿದೆ.
ಸರ್ಕಾರಿ ಶಾಲೆಯ ಮಕ್ಕಳಿಗೆ ಪ್ರಕೃತಿ ಎಂಬ ವಿಷಯವಾಗಿ ಚಿತ್ರ ಬರೆಯಲು ಹೇಳಲಾಗಿ, ಮಕ್ಕಳಿಗೆ ಬರೆಯಲು ಹಾಳೆ, ಪೆನ್ಸಿಲ್ ಹಾಗೂ ಬಣ್ಣಗಳನ್ನು ಕೂಡಾ ನೀಡುವ ಮೂಲಕ ಮಕ್ಕಳಲ್ಲಿನ ಚಿತ್ರಕಲೆಯ ಪ್ರತಿಭೆಯನ್ನು ಹೊರ ಹೊಮ್ಮಿಸಲು ಒಂದು ಅವಕಾಶ ನೀಡಿದ್ದು, ಅಲ್ಲಿನ ಶಿಕ್ಷಕರು ಜೀ ಕನ್ನಡದ ಈ ಅತ್ಯುತ್ತಮ ಪ್ರಯತ್ನಕ್ಕೆ ತಮ್ಮ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಸ್ಪರ್ಧೆಯಲ್ಲಿ ಗೆದ್ದ ಮಕ್ಕಳಿಗೆ ಬಹುಮಾನ ವಿತರಣೆ ಮಾಡುವ ಮೂಲಕ ಅವರ ಪ್ರತಿಭೆಯನ್ನು ಪುರಸ್ಕರಿಸಿದೆ ಜೀ ಕನ್ನಡ.
ಒಂದು ವಿಶೇಷ ಅಭಿಯಾನದೊಂದಿಗೆ ಈ ವರ್ಷದ ಮಕ್ಕಳ ದಿನಾಚರಣೆಯನ್ನು ಆಚರಿಸುತ್ತಿದೆ ನಿಮ್ಮ Zee ಕನ್ನಡ ವಾಹಿನಿ. ನೀವು ಕೈ ಜೋಡಿಸ್ತೀರಾ ಅಲ್ವಾ ? ಎಲ್ಲ ಮಕ್ಕಳಿಗೂ ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು! #ZeeKannada #HappyChildrensday#RememberingchachaNehru#DigitalExclusive
Zee Kannada यांनी वर पोस्ट केले बुधवार, १३ नोव्हेंबर, २०१९
ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.