ಅಜ್ಜಿ-ಅಮ್ಮನಿಗೆ ಈ ಸಿನಿಮಾ ತೋರಿಸಲು ತುಂಬಾ ಹೆದರಿದ್ದೆ- ನಟಿ ಅದಾ ಶರ್ಮ
ಮುಂಬೈ : ಬಿಡುಗಡೆಯಾಗಿ ಭರ್ಜರಿ ಹಿಟ್ ಆಗಿರುವ ದಿ ಕೇರಳ ಸ್ಟೋರಿ ಸಿನೆಮಾ ಇದೀಗ 200 ಕೋಟಿ ಕ್ಲಬ್ ಸೇರುವತ್ತ ಮುನ್ನುಗ್ಗುತ್ತಿದೆ. ಈ ನಡುವೆ ಸಿನೆಮಾದ ನಟಿ ಅದಾ ಶರ್ಮಾ ತಮ್ಮ ಕುಟುಂಬದವರಿಗೆ ಈ ಸಿನೆಮಾ ತೋರಿಸಲು ತಾವು ಪಟ್ಟ ಕಷ್ಟವನ್ನು ವಿವರಿಸಿದ್ದಾರೆ
ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನಟಿ ಅದಾ ಶರ್ಮಾ ಈ ಸಿನಿಮಾದ ಬಗ್ಗೆ ತನ್ನ ಅಜ್ಜಿ ಮತ್ತು ತಾಯಿಯ ಪ್ರತಿಕ್ರಿಯೆ ಹೇಗಿತ್ತು ಎಂದು ಬಹಿರಂಗ ಪಡಿಸಿದ್ದಾರೆ. ಅವರಿಬ್ಬರೂ ಸಿನಿಮಾ ನೋಡುವಾಗ ತುಂಬಾ ನರ್ವಸ್ ಆಗಿದ್ದೆ ಎಂದು ಹೇಳಿದ್ದಾರೆ. ‘ನನ್ನ ತಾಯಿ ಮತ್ತು ಅಜ್ಜಿಗೆ ಕಥೆ ಗೊತ್ತಿತ್ತು. ನಾನು ಅಜ್ಜಿಯ ಪ್ರತಿಕ್ರಿಯೆಯ ಬಗ್ಗೆ ತುಂಬಾ ಹೆದರಿದ್ದೆ. ಅದರಲ್ಲೂ ಆ ಅತ್ಯಾಚಾರದ ದೃಶ್ಯಗಳು ಹಾಗೂ ಎಲ್ಲಾ ಗೊಂದಲದ ಕ್ಷಣಗಳಿಗೆ ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದರ ಬಗ್ಗೆ ನಾನು ತುಂಬಾ ಚಿಂತಿಸುತ್ತಿದ್ದೆ’ ಎಂದು ಹೇಳಿದರು. ‘ನನ್ನ 90 ವರ್ಷದ ಅಜ್ಜಿ ಗಟ್ಟಿಗಿತ್ತಿ ಎಂದು ನಾನು ಒಪ್ಪಿಕೊಳ್ಳುತ್ತೇನೆ. ಸಿನಿಮಾ ವೀಕ್ಷಿಸಿದ ನಂತರ ಅದನ್ನು ಶೈಕ್ಷಣಿಕ ಮತ್ತು ತಿಳಿವಳಿಕೆ ಅನುಭವ ಎಂದು ಕರೆದರು ಮತ್ತು ‘ನನ್ನ ಎಲ್ಲಾ ವಿದ್ಯಾರ್ಥಿಗಳು ಇದನ್ನು ವೀಕ್ಷಿಸಬೇಕೆಂದು ನಾನು ಬಯಸುತ್ತೇನೆ’ ಎಂದು ಹೇಳಿದರು