Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಇನ್ಸ್ಟಾದಲ್ಲಿ ಪತಿಯನ್ನು ಅನ್‌ಫಾಲೋ ಮಾಡಿದ ನಯನತಾರಾ: ಕಾರಣ ಗೊತ್ತಾ?

ಹೈದರಾಬಾದ್: ಇನ್ಸ್ಟಾಗ್ರಾಮ್‌ನಲ್ಲಿ ಸದಾ ಕ್ರಿಯಾಶೀಲರಾಗಿ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದ ನಟಿ ನಯನತಾರಾ ಈಗ ಭಾವುಕ ಪೋಸ್ಟ್ ಹಾಕಿದ್ದಾರೆ.

ಇದ್ದಕ್ಕಿದ್ದಂತೆ ನಯನತಾರಾ ಪತಿಯನ್ನು ಇನ್ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ. ಈ ದಂಪತಿಗೆ ಅಚಾನಕ್ ಇದೇನಾಯ್ತು? ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

“ನಾನು ಕಣ್ಣೀರಿನಲ್ಲೂ ಇದನ್ನೇ ಪಡೆದಿದ್ದೇನೆ” ಎಂದು ಬರೆದಿರುವ ನಯನತಾರಾ ಪತಿವಿಘ್ನೇಶ್ ಶಿವನ್‌ರನ್ನು ಅನ್‌ಫಾಲೋ ಮಾಡಿದ್ದಾರೆ. ಹಾಗಾದ್ರೆ ನಯತಾರಾ ಪತಿಯಿಂದ ದೂರವಾಗ್ತಾರಾ ಎಂಬ ಪ್ರಶ್ನೆಗಳು ಎದ್ದಿವೆ. ಮತ್ತೊಂದೆಡೆ ವಿಘ್ನೇಶ್ ನಯನತಾರಾ ಅವರನ್ನು ಫಾಲೋ ಮಾಡುತ್ತಿದ್ದಾರೆ. ಅಲ್ಲದೆ ಆರು ದಿನಗಳ ಹಿಂದೆ ನಯನರನ್ನು ಹೊಗಳಿ ಆಕೆಯ ಫೋಟೋಗಳನ್ನು ಶೇರ್ ಮಾಡಿದ್ದರು. ಆದರೆ ನಯನ ಅನ್ ಫಾಲೋ ಮಾಡೋದಕ್ಕೆ ಕಾರಣವೇನು ಎಂಬ ಬಗ್ಗೆ ಅಭಿಮಾನಿಗಳಲ್ಲಿ ಚರ್ಚೆ ಶುರುವಾಗಿದೆ.