‘ಜೈಲರ್’ ಆರ್ಭಟಕ್ಕೆ ಬಾಕ್ಸ್ ಆಫೀಸ್ ಧೂಳಿಪಟ – ವಿಶ್ವದಾದ್ಯಂತ ರಜಿನಿ ಅಬ್ಬರ ಜೋರು
ರಜನಿಕಾಂತ್ ಅಭಿನಯದ ‘ಜೈಲರ್’ ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ಪ್ರೇಕ್ಷಕರನ್ನ ತನ್ನತ್ತ ಸೆಳೆಯುತ್ತಿದೆ. ಜನರಿಂದಲೂ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಅತ್ತ ಬಾಕ್ಸ್ಆಫೀಸ್ ಕೂಡ ಧೂಳಿಪಟ ಮಾಡ್ತಿರೋ ತಲೈವಾ ಹವಾ, ದೊಡ್ಡ ಕಲೆಕ್ಷನ್ ಮಾಡಿದೆ. ಫಸ್ಟ್ ಡೇ ಭಾರತದಲ್ಲಿ 52 ಕೋಟಿ ಗಳಿಸಿದ್ದ ‘ಜೈಲರ್’, ವಿಶ್ವಾದ್ಯಂತ 80 ಕೋಟಿ ಕಲೆಕ್ಷನ್ ಮಾಡಿತ್ತು. ಇನ್ನು ಎರಡನೇ ದಿನವೂ ಅಭಿಮಾನಿಗಳು ಮುಗಿಬಿದ್ದು ಸಿನಿಮಾ ವೀಕ್ಷಿಸಿದ್ದು ಚಿತ್ರಮಂದಿರದ ಗಲ್ಲಾಪೆಟ್ಟಿಗೆ ತುಂಬಿವೆ. ಪರಿಣಾಮ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದಂತಾಗಿದೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದಲ್ಲಿ ಜೈಲರ್ ಸಿನಿಮಾ ಮೂಡಿಬಂದಿದೆ. ಅನಿರುದ್ಧ್ ಸಂಗೀತ ನೀಡಿದ್ದಾರೆ. ತಮನ್ನಾ, ಮೋಹನ್ ಲಾಲ್, ಶಿವರಾಜ್ ಕುಮಾರ್, ಜಾಕಿ ಶ್ರಾಫ್, ನಾಗೇಂದ್ರ ಬಾಬು, ರಮ್ಯಾ ಕೃಷ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.