Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ನಟಿ ಅಮಲಾ ಪೌಲ್ ಗೆ ಧಮ್ಕಿ ಹಾಕಿದ್ದ ರಜನಿಕಾಂತ್ – ಮಗಳಿಗಾಗಿ ಖಡಕ್ ಆದ್ರಾ ಸೂಪರ್ ಸ್ಟಾರ್?

ಸೂಪರ್‌ ಸ್ಟಾರ್ ರಜನಿಕಾಂತ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಐಶ್ವರ್ಯ ಹಾಗೂ ಸೌಂದರ್ಯ ಎಂಬ ಇಬ್ಬರ ದಾಂಪತ್ಯ ಜೀವನದಲ್ಲಿ ಬಿರುಕಾಗಿದ್ದು, ಸೌಂದರ್ಯ ಅವರು ಈಗಾಗಲೇ ಗಂಡನಿಂದ ವಿಚ್ಛೇದನ ಪಡೆದು ದೂರವಾಗಿದ್ದಾರೆ. ಇನ್ನೂ ನಟ ಧನುಷ್‌ ಅವರನ್ನು ಮದುವೆಯಾಗಿರುವ ಐಶ್ವರ್ಯ ಕೂಡ ಗಂಡನಿಂದ ದೂರವಾಗಿ ಬೇರೆ ಮನೆಯಲ್ಲಿ ವಾಸವಾಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯ.

ಇನ್ನೂ ಇವರಿಬ್ಬರ ದಾಂಪತ್ಯವನ್ನು ಸರಿಮಾಡಲು ರಜನಿಕಾಂತ್ ಅವರು ತುಂಬಾನೇ ಪ್ರಯತ್ನ ಪಟಿದ್ದಾರಂತೆ. ಇದೀಗ ಈ ಸಂಬಂಧ ಪತ್ರಕರ್ತರೊಬ್ಬರು ಮಾತನಾಡಿರುವ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಜನಿಕಾಂತ್ ಯಾರಿಗಾದ್ರೂ ಧಮ್ಕಿ ಹಾಕಲು ಸಾಧ್ಯವೇ? ಯಾರನ್ನೇ ನೋಡಿದ್ರೂ ಕೈಮುಗಿದು ಗೌರವ ಕೊಡುವ ರಜನಿಕಾಂತ್ ಅವರು ತಮ್ಮ ಮಗಳ ದಾಂಪತ್ಯ ಸಂಬಂಧ ಮಲೆಯಾಳಂ ನಟಿಗೆ ಧಮ್ಕಿ ಹಾಕಿದ್ದಾರೆ ಎಂಬ ವಿಷಯವನ್ನು ಪತ್ರಕರ್ತ ಹೇಳಿಕೊಂಡಿದ್ದಾರೆ. ಆ ನಟಿ ಬೇರಾರೂ ಅಲ್ಲ. ಕನ್ನಡದ ಹೆಬ್ಬುಲಿ ಸಿನಿಮಾದಲ್ಲಿ ನಟ ಸುದೀಪ್‌ಗೆ ನಾಯಕಿಯಾಗಿ ನಟಿಸಿದ ಅಮಲಾ ಪೌಲ್‌ ಅನ್ನೋ ಸುದ್ದಿ ಹೆಚ್ಚು ಕುತೂಹಲ ಮೂಡಿಸಿದೆ.

ಈ ಹಿಂದೆ ನಟಿ ಅಮಲಾ ಪೌಲ್ ಮತ್ತು ಧನುಷ್ ಒಟ್ಟಿಗೆ ಸಿನಿಮಾ ಮಾಡಿದ್ದಾರೆ. ಆಗಲೇ ಇವರಿಗೆ ಆತ್ಮೀಯತೆ ಬೆಳೆದಿದೆ. ಅದು ಇನ್ನೂ ಒಂದು ಲೆವಲ್‌ಗೆ ಹೋಗಿ ಇಬ್ಬರ ಮಧ್ಯೆ ಪ್ರೀತಿ ಬೆಳೆದಿದೆ. ಇದರಿಂದ ಐಶ್ವರ್ಯ ಹಾಗೂ ಧನುಷ್ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಮಾತಿದೆ. ಈ ವೇಳೆ ರಜನಿಕಾಂತ್ ಅವರು ತಮ್ಮ ಮಗಳ ಬದುಕು ಸರಿಮಾಡುವ ಸಲುವಾಗಿ ನಟಿ ಅಮಲಾ ಪೌಲ್‌ ಮನೆಗೆ ಹೋಗಿ ಎಚ್ಚರಿಕೆ ನೀಡಿದ್ದಾರೆ ಎಂದು ಪತ್ರಕರ್ತರೊಬ್ಬರು ಹೇಳಿಕೊಂಡಿದ್ದಾರೆ. ಈ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.