Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ನಟಿ ಮೀನಾ ಎರಡನೇ ಮದುವೆ ವದಂತಿ – ಮೀನಾ ಆಪ್ತ ಸ್ನೇಹಿತೆ ನೀಡಿದ್ರು ಸ್ಪಷ್ಟನೆ..!

ಬಹುಭಾಷಾ ನಟಿ ಮೀನಾ ಎರಡನೇ ಮದುವೆಗೆ ಸಜ್ಜಾಗಿದ್ದಾರೆ ಎನ್ನುವ ವಿಚಾರಗಳು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದ್ದು, ಮತ್ತೆ ಈ ವಿಚಾರ ಚರ್ಚೆಗೆ ಬಂದಿದೆ. ಯಾಕೆಂದರೆ ನಟಿ ಮೀನಾ ಅವರ ಗೆಳತಿ ಈ ಬಗ್ಗೆ ಮಾತನಾಡಿದ್ದಾರೆ.

ನಟಿ ಮೀನಾ ಪತಿ ವಿದ್ಯಾ ಸಾಗರ್ 2022ರಲ್ಲಿ ಅನಾರೋಗ್ಯದಿಂದ ನಿಧನರಾದರು. ಆದರೆ ಈ ಎರಡು ವರ್ಷಗಳಲ್ಲಿ ಸಾಕಷ್ಟು ಬಾರಿ ಮೀನಾ ಅವರ ಎರಡನೇ ವಿವಾಹ ವಿಚಾರಗಳು ಪ್ರಸ್ತಾಪವಾಗುತ್ತಲೇ ಇದೆ. ಹಲವು ನಟರ ಜೊತೆ ಮೀನಾ ಹೆಸರು ಕೇಳಿಬಂದು ಗಾಸಿಪ್‌ ಗೂ ಕಾರಣವಾಯಿತು. ಆದರೂ ಮೀನಾ ಯಾವುದಕ್ಕೂ ಪ್ರತಿಕ್ರಿಯಿಸಲಿಲ್ಲ. ಈಗ ಮೀನಾ ಗೆಳತಿ, ಡ್ಯಾನ್ಸ್ ಕೋರಿಯೋಗ್ರಾಫರ್ ಕಲಾ‌ ಅವರು ಮೀನಾ ಅವರ ಎರಡನೇ ವಿವಾಹದ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಸದಾ ಮೀನಾ ಅವರ ಕಷ್ಟ ಸುಖದಲ್ಲಿ ಜೊತೆಯಾಗಿರುವ ಕಲಾ ಅವರು ಸಂದರ್ಶನವೊಂದರಲ್ಲಿ ಮೀನಾ ಅವರ ಎರಡನೇ ಮದುವೆ ವಿಷಯವಾಗಿ ಮಾತನಾಡಿದ್ದಾರೆ. ತಾವು ಹಲವು ಬಾರಿ ಮೀನಾ ಅವರಿಗೆ ಎರಡನೇ ಮದುವೆ ಮಾಡಿಕೊಳ್ಳಲು ಒತ್ತಾಯಿಸಿರುವುದಾಗಿ ತಿಳಿಸಿದ್ದಾರೆ. ಆದರೆ ಮೀನಾ ಅವರು ಮಾತ್ರ ಯಾವ ಸಂದರ್ಭದಲ್ಲೂ ಎರಡನೇ ಮದುವೆ ಆಗೋದಿಲ್ಲ ಎಂದು ಹೇಳಿದ್ದಾರೆ. ನನ್ನ ವೈಯಕ್ತಿಕ ವಿಚಾರದಲ್ಲಿ ತಲೆ ಹಾಕಬೇಡ ಎಂದು ತಮಗೆ ಸೂಚಿರುವುದಾಗಿ ತಿಳಿಸಿದ್ದಾರೆ ಎಂದಿದ್ದಾರೆ ಕಲಾ.

ಅಭಿನಯಕ್ಕೆ ಮತ್ತೆ ಮರಳಿರುವ ಮೀನಾ ತಮ್ಮ ಸಂಪೂರ್ಣ ಜೀವನವನ್ನು ಮಗಳ ಜೊತೆ ಕಳೆಯಲು ನಿರ್ಧರಿಸಿರುವುದಾಗಿ ತಿಳಿದುಬಂದಿದೆ.