Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ ಜೋಡಿಯ ಮದುವೆಯ ರಂಗು ಶುರುವಾಗಿದೆ

ಮುಂಬೈ: ಬಾಲಿವುಡ್ ಖ್ಯಾತ ನಟಿ ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ವಿವಾಹ ಸೆಪ್ಟಂಬರ್ 24ರಂದು ಉದಯಪುರದಲ್ಲಿ ನಡೆಯುತ್ತಿದೆ. ಪರಿಣಿತಿ ಚೋಪ್ರಾ ಮದುವೆ ಸಿದ್ಧತೆ ಭರ್ಜರಿಯಾಗಿ ನಡೆದಿದೆ.

ನಾಳೆಯಿಂದ ಮದುವೆ ಕಾರ್ಯಕ್ರಮಗಳು ಉದಯಪುರದಲ್ಲಿ ನಡೆಯಲಿದ್ದು, ಇಂದು ಪರಿಣಿತಿ ಮತ್ತು ರಾಘವ್ ಉದಯಪುರ ಏರ್ ಪೋರ್ಟಿಗೆ ಬಂದಿಳಿದಿದ್ದಾರೆ. ನವ ಜೋಡಿಯನ್ನು ಸ್ವಾಗತಿಸುವುದಕ್ಕಾಗಿ ಉದಯಪುರ ಏರ್ ಪೋರ್ಟ್ ನ್ನು ಅಲಂಕಾರಿಸಲಾಯಿತು.

ರಾಜಸ್ತಾನದ ಸಂಪ್ರದಾಯದಂತೆ ಪರಿಣಿತಿ ಮತ್ತು ರಾಘವ್ ಜೋಡಿಯನ್ನು ಸ್ವಾಗತಿಸಲಾಯಿತು. ದುಬಾರಿ ಕಾರಿನಲ್ಲಿ ನವ ಜೋಡಿ ಪಂಚತಾರಾ ಹೋಟೆಲ್ ಪ್ರಯಾಣಿಸಿದರು. ಮುಂಬೈನ ಪರಿಣಿತಿ ಮನೆಯು ಮದುವಣಗಿತ್ತಿಯಂತೆ ಕಂಗೋಳಿಸುತ್ತಿದೆ. ಇತ್ತ ಮದುವೆ ನಡೆಯಲಿರುವ ಉದಯಪುರದ ಲೀಲಾ ಪ್ಯಾಲೇಸ್ ಕೂಡ ಸಜ್ಜಾಗಿದೆ. ಸೆ.23 ಮತ್ತು 24 ರಂದು ಎರಡು ದಿನಗಳ ಕಾಲ ಅದ್ದೂರಿಯಾಗಿ ಮದುವೆ ಸಮಾರಂಭ ನಡೆಯಲಿದೆ.

ಪ್ರೀತಿಸಿದ ಗೆಳೆಯ, ರಾಜಕಾರಣಿ ರಾಘವ್ ಚಡ್ಡಾ ಜೊತೆ ಸೆ.24ರಂದು ಉದಯಪುರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.ಪಂಜಾಬ್ ಸಂಪ್ರದಾಯದಂತೆ ಮದುವೆ ನಡೆಯಲಿದೆ. ವಿವಾಹ ಸಮಾರಂಭಗಳು ಸೆ.22ರಿಂದ ಪ್ರಾರಂಭವಾಗಲಿದ್ದು, ಸೆ.24ರವರೆಗೆ ನಡೆಯಲಿದೆ. ಸೆ.30ರಂದು ಚಂಡೀಗಢದ ತಾಜ್ ಹೋಟೆಲ್‍ನಲ್ಲಿ ಆರತಕ್ಷತೆ ನಡೆಯಲಿದ್ದು ಹಲವಾರು ಸೆಲೆಬ್ರಿಟಿ, ರಾಜಕಾರಣಿಗಳು ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ.