Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಬಾಯ್ ಫ್ರೆಂಡ್ ಜೊತೆ ಲಂಡನ್‌ಗೆ ಹಾರಿದ ಅಜಯ್ ದೇವಗನ್ ಪುತ್ರಿ – ಪೊಟೊ ವೈರಲ್

ಮುಂಬೈ:ಪಾರ್ಟಿ, ಫ್ರೆಂಡ್ಸ್, ಟ್ರಿಪ್ ಅಂತ ಓಡಾಡುವ ಫೇಮಸ್ ಸ್ಟಾರ್ ಕಿಡ್‌ಗಳ ಮಕ್ಕಳಲ್ಲಿ ನಿಸಾ  ಕೂಡ ಒಬ್ಬರು. ಬಾಲಿವುಡ್ ನಟ ಅಜಯ್ ದೇವಗನ್ ಹಾಗೂ ಕಾಜೋಲ್ ಅವರ ಪುತ್ರಿಯಾದ ನಿಸಾ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ನಿಸಾ ಸದ್ಯ ಲಂಡನ್‌ನಲ್ಲಿದ್ದು ತನ್ನ ಬಾಯ್ ಫ್ರೆಂಡ್ ಜೊತೆ ನಿಸಾ ಮೋಜು ಮಸ್ತಿ ಮಾಡುತ್ತಾ,  ಫ್ರೆಂಡ್ಸ್ ಜೊತೆ ಪಾರ್ಟಿ ಮಾಡಿ ಕಾಲ ಕಳೆಯುತ್ತಿದ್ದಾರೆ. ಇವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಆಗಿದೆ.

ಅನೇಕ  ವಿಚಾರವಾಗಿ ಸಖತ್ ಟ್ರೋಲ್ ಆಗಿದ್ದ ನಿಸಾ,  ಇದೀಗ ಲಂಡನ್‌ನಲ್ಲಿರುವ ನಿಸಾ ಬಾಯ್ ಫ್ರೆಂಡ್ ಜೊತೆಗಿನ ಫೋಟೋ ವೈರಲ್ ಆಗಿದ್ದು , ನಿಸಾ ಅವರ ಸ್ನೇಹಿತ ಅರ್ಹಾನ್ ಅವತ್ರಮಣಿ ಅವರು ಸಿನಿಮಾರಂಗದ ಟಚ್‌ನಲ್ಲಿ ಇಲ್ಲ. ಆದರೂ ಸ್ಟಾರ್ ಕಿಡ್‌ಗಳ ಜೊತೆ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದಾರೆ. ಫ್ಯಾಷನ್ ಕ್ರೇಸ್ ಅರ್ಹಾನ್- ನಿಸಾ ಇಬ್ಬರೂ ಸಿಕ್ಕಾಪಟ್ಟೆ ಕ್ಲೋಸ್ ಆಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಇನ್ನೂ ಇವರಿಬ್ಬರ ಫೋಟೋಗಳನ್ನು ಕೂಡ  ಸ್ವತಃ ಅರ್ಹಾನ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು ಅಲ್ಲದೇ ಲಂಡನ್ ಕ್ಲಬ್‌ನಲ್ಲಿ ಪಾರ್ಟಿ ಮಾಡಿರುವ ಫೋಟೋವನ್ನು ಹರಿಬಿಟ್ಟಿದ್ದಾರೆ. ಬಾಲಿವುಡ್‌ನ ಸ್ಟಾರ್ ಕಿಡ್ಸ್ ಸಾಮಾನ್ಯವಾಗಿ ಪಾರ್ಟಿ ಮಾಡುವ ಜಾಗ ಅದಾಗಿದ್ದು , ನಿಸಾ ಕೂಡ ಅಲ್ಲೇ ಪಾರ್ಟಿ ಮಾಡಿದ್ದಾರೆ. ನಿಸಾ ಫೋಟೋಗಳಿಗೆ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ. ಫೋಟೋಗಳು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿವೆ.

ನಿಸಾ ಸಿನಿಮಾರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಡುತ್ತಾರೆ ಎಂದು ಹೇಳಲಾಗುತ್ತಿದೆ. ಅಜಯ್- ಕಾಜಲ್ ಜೋಡಿ  ಮಗಳ ಬಾಲಿವುಡ್ ಎಂಟ್ರಿ ಬಗ್ಗೆ ಗುಡ್ ನ್ಯೂಸ್ ಕೊಡುತ್ತಾರಾ ಎಂದು ಕಾದುನೋಡಬೇಕಿದೆ.