ಮದುವೆ ಯಾವಾಗ ಎಂದಿದ್ದಕ್ಕೆ ‘ನಾನಿನ್ನು ಗರ್ಭಿಣಿಯಾಗಿಲ್ಲ’ ಎಂದ ತಾಪ್ಸಿ
ಅಭಿಮಾನಿಗಳ ಜೊತೆ ಸೋಶಿಯಲ್ ಮೀಡಿಯಾ ಮೂಲಕ ತಾಪ್ಸಿ ಪನ್ನು ಅವರು ಪ್ರಶ್ನೋತ್ತರ ನಡೆಸಿದ್ದಾರೆ. ಈ ವೇಳೆ ಹಲವು ಬಗೆಯ ಪ್ರಶ್ನೆಗಳು ಅವರಿಗೆ ಎದುರಾಗಿವೆ. ಅಚ್ಚರಿ ಎಂದರೆ, ಮದುವೆ ಬಗ್ಗೆ ಕೇಳಿದ್ದಕ್ಕೆ ಪ್ರೆಗ್ನೆನ್ಸಿ ವಿಚಾರವನ್ನು ತಾಪ್ಸಿ ಪನ್ನು ಸ್ಪಷ್ಟಪಡಿಸಿದ್ದಾರೆ. ಹೌದು ಗುಂಗುರು ಕೂದಲಿನ ಸುರಸುಂದರಾಂಗಿ ತಾಪ್ಸಿ ಪನ್ನು ಇನ್ಸ್ಟಾದಲ್ಲಿ ಸದಾ ಆ್ಯಕ್ಟೀವ್. ಆಗಾಗ ಅಭಿಮಾನಿಗಳ ಜೊತೆಗೆ ಏನಾದರೊಂದು ಸಂಗತಿಯನ್ನ ಹಂಚಿಕೊಳ್ಳುತ್ತಿರುತ್ತಾರೆ. ಆದರೀಗ ಅಭಿಮಾನಿ ‘ನಿಮ್ಮ ಮದುವೆ ಯಾವಾಗ?’ ಎಂದು ಕೇಳಿದ್ದಾನೆ. ಆದರೆ ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿದ ತಾಪ್ಸಿ ‘ಹಾಗಾದರೆ ನಾನು ಯಾವಾಗ ಮದುವೆಯಾಗುತ್ತೇನೆ? ನಾನಿನ್ನು ಗರ್ಭಿಣಿಯಾಗಿಲ್ಲ. ಆದ್ದರಿಂದ ಶೀಘ್ರದಲ್ಲಿ ಇಲ್ಲ. ನಾನು ಎಲ್ಲರಿಗೂ ತಿಳಿಸುತ್ತೇನೆ’’ ಎಂದು ಹೇಳಿದ್ದಾರೆ. ಆದರೆ ಆಕೆಯ ಉತ್ತರಕ್ಕೆ ಫ್ಯಾನ್ಸ್ ನಕ್ಕಿದ್ದಾರೆ. ತಾಪ್ಸಿ ಡೇಟಿಂಗ್ ಬಗ್ಗೆ ಆಗಾಗ ಸುದ್ದಿಯಾಗುತ್ತಲೇ ಇದೆ. ಬ್ಯಾಡ್ಮಿಂಟನ್ ಆಟಗಾರ ಮಥಿಯಾಸ್ ಬೋ ಅವರೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇದು ನಿಜವೇ? ಎಂಬುದು ಅವರೇ ತಿಳಿಸಬೇಕಿದೆ.