Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ರಾಖಿ ಸಾವಂತ್​ ಬಯೋಪಿಕ್’​ ಗೆ ಕಾಂತಾರದ ರಿಷಬ್​ ಶೆಟ್ಟಿ ಆ್ಯಕ್ಷನ್ -ಕಟ್..!!?

ತಮ್ಮ ಜೀವನದ ಕಥೆಯನ್ನು ಆಧರಿಸಿ ತಯಾರಾಗುವ  ಸಿನಿಮಾಗೆ ರಿಷಬ್​ ಶೆಟ್ಟಿ ನಿರ್ದೇಶನ ಮಾಡಬೇಕು ಎಂದು ರಾಖಿ ಸಾವಂತ್ ಹೇಳಿದ್ದಾರೆ.

ಮೈಸೂರು : ರಾಖಿ ಸಾವಂತ್​ ಜೀವನದ ಕಥೆ ಇಟ್ಟುಕೊಂಡು ಸಿನಿಮಾ ಮಾಡಲು ಪ್ಲ್ಯಾನ್ ಆಗ್ತಿದೆ. ಸಿನೆಮಾಕ್ಕೆ ಹಣ ಸುರಿಯಲು ನಿರ್ಮಾಪಕರು ಕೂಡ ಮುಂದೆ ಬಂದಿದ್ದಾರೆ.

ವಿದ್ಯಾ ಬಾಲನ್​ ತನ್ನ ಪಾತ್ರ ಮಾಡಿದರೆ ಉತ್ತಮ ಮತ್ತು ರಿಷಬ್ ಶೆಟ್ಟಿಯೇ ನಿರ್ದೇಶನ ಮಾಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿವಾದಗಳಿಂದಲೇ ಹೆಚ್ಚು ಪ್ರಚಾರ ಪಡೆದಿದ್ದ ರಾಖೀ ಸಾವಂತ್ ಪ್ರತಿ ದಿನವೂ ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಆಗುತ್ತಲೇ ಇರುತ್ತಾರೆ. ರಾಖಿ ಸಾವಂತ್​ ಅವರ ವೈಯಕ್ತಿಕ ಜೀವನದ ವಿಚಾರಗಳು ಬೀದಿಗೆ ಬಂದಿವೆ.

ಪತಿ ಆದಿಲ್​ ಖಾನ್​ ಜೊತೆ ಅವರು ಕಿರಿಕ್​ ಮಾಡಿಕೊಂಡಿದ್ದು ಎಲ್ಲರಿಗೂ ತಿಳಿದಿದೆ. ಈಗ ಅವರು ತಮ್ಮ ಬಯೋಪಿಕ್ ಮಾಡುವ ಬಗ್ಗೆ ಒಂದು ಆಸೆ ವ್ಯಕ್ತಪಡಿಸಿದ್ದಾರೆ.

ತಮ್ಮ ಜೀವನದ ಕಥೆಯನ್ನು ಆಧರಿಸಿ ತಯಾರಾಗುವ  ಸಿನಿಮಾಗೆ ರಿಷಬ್​ ಶೆಟ್ಟಿ ನಿರ್ದೇಶನ ಮಾಡಬೇಕು ಎಂದು ರಾಖಿ ಸಾವಂತ್ ಹೇಳಿದ್ದಾರೆ.

ಇದಕ್ಕೆ ರಿಷಬ್​ ಶೆಟ್ಟಿ ಅವರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬ ಕೌತುಕ ಮೂಡಿದೆ.

ಚಿತ್ರಕಥೆ, ಸಂಗೀತ, ನಿರ್ದೇಶನ ಎಲ್ಲ ವಿಭಾಗದಲ್ಲೂ ದೊಡ್ಡ ತಂತ್ರಜ್ಞರನ್ನು ಆಯ್ಕೆ ಮಾಡಿಕೊಳ್ಳುತ್ತೇವೆ.

ನನಗೆ ಕಾಂತಾರ ಚಿತ್ರದ ನಿರ್ದೇಶಕ ರಿಷಬ್​ ಶೆಟ್ಟಿ ಹೆಚ್ಚು ಇಷ್ಟ’ ಎಂದು ಮೈಸೂರಿನಲ್ಲಿ ಅವರು ಸುದ್ದಿಗೋಷ್ಠಿ ನಡೆಸಿ ರಾಖಿ ವಿಚಾರ ಹೇಳಿದ್ದಾರೆ.

ಸದ್ಯ ರಿಷಬ್​ ಶೆಟ್ಟಿ ಅವರು ‘ಕಾಂತಾರ 2’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.