Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಸಿನಿ ಜರ್ನಿ ನೀವು ಅಂದಿಕೊಂಡಿರುವಷ್ಟು ಸುಲಭವಲ್ಲ.! “ಡಿ’ ಬಾಸ್‌

 

ಬೆಂಗಳೂರು: 25 ವರ್ಷಗಳ ತಮ್ಮ ಸಿನಿ ಜರ್ನಿ ಅಷ್ಟೊಂದು ಸುಲಭವಾಗಿರಲಿಲ್ಲ, ಸಾಕಷ್ಟು ಕಷ್ಟಗಳು ಆದಮೇಲೆಯೇ ಈ ಯಶಸ್ವಿ ಬಂದಿದೆ ಎಂದು ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಹೇಳಿದರು.

ಜನ್ಮದಿನದ ಪ್ರಯುಕ್ತ ಬೆಂಗಳೂರಿನ ಆರ್‌ಆರ್‌ ನಗರದಲ್ಲಿ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸುತ್ತಾ ಮಾತನಾಡಿದರು. ಇಷ್ಟು ದಿನ ಒಳ್ಳೆಯವರಾಗಿದ್ದು ಸಾಕು, ಇನ್ನಾದರೂ ವಿಲನ್ ಆಗೋಣ ಅಂತಾ ತಮ್ಮ ಮುಂಬರುವ ಹೊಸ ಸಿನಿಮಾ ‘ಡೆವಿಲ್’ ಫಸ್ಟ್ ಲುಕ್ ಬಿಟ್ಟಿರುವುದಾಗಿ ತಮಾಷೆಯಿಂದ ಪ್ರತಿಕ್ರಿಯಿಸಿದರು.