Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ನಟಿ ರುಕ್ಮಿಣಿ ವಸಂತ್‌ಗೆ ಟಾಲಿವುಡ್‌ನಿಂದ ಬಂಪರ್ ಆಫರ್‌

ಬೆಂಗಳೂರು: ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ನಟಿ ರುಕ್ಮಿಣಿ ವಸಂತ್‌ ಅವರಿಗೆ ಟಾಲಿವುಡ್‌ನಿಂದ ಬಂಪರ್ ಆಫರ್‌ಗಳು ಬರುತ್ತಿದೆ.

ತೆಲುಗು ವರ್ಷನ್‌ನಲ್ಲಿ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಬಿಡುಗಡೆಯಾದ ಬಳಿಕ ರುಕ್ಮಿಣಿ ವಸಂತ್‌ಗೆ ತೆಲುಗಿನ ಪ್ರೇಕ್ಷಕರು ಕೂಡ ಫಿದಾ ಆಗಿದ್ದಾರೆ.

ಇನ್ನು ‘ಬೀರ್‌ಬಲ್’ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಟಿ ರುಕ್ಮಿಣಿ ವಸಂತ್‌ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಮೂಲಕ ಎಲ್ಲರ ಮನಸು ಕದ್ದಿದ್ದಾರೆ.