Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

69 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ವಿಜೇತರ ಪಟ್ಟಿ ಪ್ರಕಟ – ಕನ್ನಡದ ಚಾರ್ಲಿ 777 ಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ

69 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2023 ವಿಜೇತರ ಪಟ್ಟಿ ಪ್ರಕಟವಾಗಿದ್ದು, 69 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ವಿಜೇತರನ್ನು ನವದೆಹಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಘೋಷಿಸಲಾಯಿತು. ಅಲ್ಲು ಅರ್ಜುನ್ ತೆಲುಗು ಪುಷ್ಪ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟ, ಆಲಿಯಾ ಭಟ್ ಹಾಗೂ ಕೃತಿ ಸೆನನ್ ಹಿಂದಿ ಗಂಗೂಬಾಯಿ ಕಾಠಿಯಾವಾಡಿ ಹಾಗೂ ಮಿಮಿ ಚಿತ್ರದ ಅಭಿನಯಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕನ್ನಡದ ಚಾರ್ಲಿ 777 ಸಿನಿಮಾ ಅತ್ಯುತ್ತಮ ಚಿತ್ರ ಎಂಬ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ತಮಿಳು ರಾಕೆಟ್ರಿ: ದಿ ನಂಬಿ ಎಫೆಕ್ಟ್ ಅತ್ಯುತ್ತಮ ಚಿತ್ರವಾಗಿದೆ. ಅತ್ಯುತ್ತಮ ಮನೊರಂಜನಾ ಚಿತ್ರವಾಗಿ ಆಸ್ಕರ್ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಆರ್​ಆರ್​ಆರ್ ಚಿತ್ರ ಭಾಜನವಾಗಿದೆ. ಅತ್ಯುತ್ತಮ ನಿರ್ದೇಶಕ ಗೋಧಾವರಿ ಮರಾಠಿ ಚಿತ್ರದ ನಿರ್ದೇಶಕ ನಿಖಿಲ್ ಮಹಾಜನ್, ಅತ್ಯುತ್ತಮ ಸಂಗೀತ ಪುಷ್ಪದ ದೇಶ್ರೀಪ್ರಸಾದ್, ಅತ್ಯುತ್ತಮ ಗಾಯಕ ಪ್ರಶಸ್ತಿಯನ್ನು RRR ಕೋಮುರಂ ಭೀಮುಡು ಹಾಡಿಗೆ ಲಭಿಸಿದೆ. ಅತ್ಯುತ್ತಮ ಗಾಯಕಿಯಾಗಿ ಶ್ರೇಯಾ ಘೋಷಾಲ್ ಇರವಿನ್ ನಿಜಾಲ್ ಚಿತ್ರಕ್ಕೆ, ಅತ್ಯುತ್ತಮ ಪೋಷಕ ನಟಿಯಾಗಿ ಪಲ್ಲವಿ ಜೋಶಿ, ದಿ ಕಶ್ಮೀರ್ ಫೈಲ್ಸ್, ಅತ್ಯುತ್ತಮ ಆಕ್ಷನ್ ಕೊರಿಯೋಗ್ರಫಿ ಆರ್​ಆರ್​ಆರ್, ಅತ್ಯುತ್ತಮ ಮೇಕಪ್ ಗಂಗೂಬಾಯಿ ಕಾಠಿಯಾವಾಡಿ, ಸಿಂಗ್ ಡಿಸೋಜಾ ಮುಡಿಗೇರಿಸಿಕೊಂಡಿದ್ದಾರೆ.