Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

83ನೇ ವಯಸ್ಸಲ್ಲಿ 29ರ ಗರ್ಲ್​ಫ್ರೆಂಡ್​ನಿಂದ ಅಪ್ಪ ಆಗ್ತಿರೋ ಆಸ್ಕರ್​ ಪ್ರಶಸ್ತಿ ಸೂಪರ್​ಸ್ಟಾರ್​!

ಇತ್ತೀಚಿನ ದಿನಗಳಲ್ಲಿ ಸಿನಿಮಾದಲ್ಲಿ ಮದುವೆ, ಮಕ್ಕಳದ್ದೇ ಸುದ್ದಿ. ಅದರಲ್ಲಿಯೂ ವಯಸ್ಸಿನಲ್ಲಿ ಹೆಚ್ಚು ಅಂತರವುಳ್ಳವರನ್ನು ಮದುವೆಯಾಗುವುದು ಸಾಮಾನ್ಯವಾಗಿದೆ. ಈ ಹಿಂದೆ 2-3 ಮಕ್ಕಳ ತಂದೆಯನ್ನು ನಟಿಯರು ವರಿಸಿದ್ದು ಇದ್ದರೆ ಈಗ ಸುದ್ದಿಯಾಗುತ್ತಿರುವುದು ಹೆಚ್ಚು ವಯಸ್ಸಿನ ಅಂತರದ ಮದುವೆಯ ಕುರಿತು. ಇದೀಗ ಅವೆಲ್ಲವುಗಳಿಂದಲೂ ಒಂದು ಹೆಜ್ಜೆ ಮುಂದೆ ಹೋಗಿ ಕುತೂಹಲದ ಘಟನೆ ನಡೆದಿದೆ. ಅದು ಸಾಮಾನ್ಯವಾಗಿ ಯಾರೂ ಕಲ್ಪಿಸಿಕೊಳ್ಳದಂಥ ಘಟನೆಯಾಗಿದೆ.

ಅದೇನೆಂದರೆ 83 ವರ್ಷದ ಸೂಪರ್​ಸ್ಟಾರ್​ ನಟನೊಬ್ಬ ಅಪ್ಪ ಆಗ್ತಿರೋ ಸುದ್ದಿ ಇದು. ಈ ವಯಸ್ಸಿನಲ್ಲಿ ಅಪ್ಪ ಆಗಿದ್ದೇ ಅಚ್ಚರಿ ಎಂದರೆ, ಇನ್ನೂ ಹೆಚ್ಚಿನ ಅಚ್ಚರಿಯಾಗಿರುವುದು ಇವರ ಅಪ್ಪ ಆಗ್ತಿರೋದು ತಮ್ಮ ಮೊಮ್ಮಗಳ ವಯಸ್ಸಿನ ಗರ್ಲ್​ಫ್ರೆಂಡ್​​ನಿಂದಾಗಿ. ಹೌದು, ಕೇಳಲು ಸ್ವಲ್ಪ ಅಸಹ್ಯ ಎನಿಸಿದರೂ ಇದು ಸತ್ಯ.

ಈ ನಟನ ಗರ್ಲ್​ಫ್ರೆಂಡ್​ಗೆ ವಯಸ್ಸು 29. 29ರ ಹರೆಯದ ಸ್ನೇಹಿತೆಯಿಂದ ತಂದೆಯಾಗುತ್ತಿದ್ದಾರೆ 83 ವರ್ಷದ ನಟ. ಇವರು ಅಂತಿಂಥ ನಟನಲ್ಲ, ಬದಲಿಗೆ ಆಸ್ಕರ್​ ಪ್ರಶಸ್ತಿ ಪುರಸ್ಕೃತ ನಟ. ಹಾಲಿವುಡ್​ ಖ್ಯಾತ ನಟನಾಗಿರುವ ಅಲ್​ ಪಸಿನೊ ತನ್ನ 29 ವರ್ಷದ ಗರ್ಲ್​ಫ್ರೆಂಡ್ ಮಗುವಿಗೆ ತಂದೆಯಾಗುವ ಸಂಭ್ರಮದಲ್ಲಿದ್ದಾರೆ. ಇದಾಗಲೇ ಇಬ್ಬರು ಹೆಂಡತಿಯರಿಂದ ಮೂರು ಮಕ್ಕಳ ತಂದೆಯಾಗಿರುವ ಅಲ್​ ಪಸಿನೊ, ಈಗ 29 ವರ್ಷದ ನೂರ್ ಆಲ್ಫಲ್ಲಾ ಎಂಬಾಕೆಯಿಂದ ಮಗು ಪಡೆಯುತ್ತಿದ್ದಾರೆ. 2022ರಿಂದ ಇವರು ಒಟ್ಟಿಗೆ ಇದ್ದು, ಅದರ ಫಲವಾಗಿ ನೂರ್​ ಗರ್ಭಿಣಿಯಾಗಿದ್ದಾರೆ. ಈ ಸಂತೋಷದ ವಿಷಯವನ್ನು ಖುದ್ದು ನಟ ಶೇರ್​ ಮಾಡಿಕೊಂಡಿದ್ದಾರೆ. ನೂರ್ ಆಲ್ಫಲ್ಲಾ ಜೊತೆ ತಾವು ಡೇಟಿಂಗ್ ಮಾಡುತ್ತಿದ್ದು, ಅದರ ಫಲವಾಗಿ ಮಗುವಾಗುತ್ತಿದೆ ಎಂದು ಸಂತಸದಿಂದ ನಟ ಹೇಳಿಕೊಂಡಿದ್ದಾರೆ.