Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಖ್ಯಾತ ನಟ ಶ್ರೇಯಸ್‌ ತಲ್ಪಾಡೆ ಹೃದಯಾಘಾತ; ಆಸ್ಪತ್ರೆಗೆ ದಾಖಲು

ಮುಂಬೈ: ಹಿಂದಿ ಮತ್ತು ಮರಾಠಿ ಚಿತ್ರರಂಗದ ಖ್ಯಾತ ನಟ ಶ್ರೇಯಸ್‌ ತಲ್ಪಾಡೆ ಅವರು ಸಿನಿಮಾ ಶೂಟಿಂಗ್ ಮಾಡುತ್ತಿದ್ದ ವೇಳೆ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಸದ್ಯ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎಂದು ವರದಿಯಾಗಿದೆ.

47 ವರ್ಷ ವಯಸ್ಸಿನ ಶ್ರೇಯಸ್ ಅವರು ಅಕ್ಷಯ್ ಕುಮಾರ್ ಅವರೊಂದಿಗೆ ‘ವೆಲ್‌ಕಮ್ ಟು ದಿ ಜಂಗಲ್‌’ ಸಿನಿಮಾದ ಚಿತ್ರೀಕರಣದರಲ್ಲಿ ಭಾಗಿಯಾಗಿದ್ದರು. ಚಿತ್ರೀಕರಣ ವೇಳೆ ಕುಸಿದುಬಿದ್ದಿದ್ದರು ಎನ್ನಲಾಗಿದೆ. ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತು ಎಂದು ವರದಿ ತಿಳಿಸಿದೆ. ಆಂಜಿಯೋಪ್ಲ್ಯಾಸ್ಟಿಗೆ ಒಳಗಾಗಿದ್ದು, ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.

ಸೆಟ್‌ನಲ್ಲಿ ಎಲ್ಲರೊಂದಿಗೆ ತಮಾಷೆ ಮಾಡುತ್ತ, ಲವಲವಿಕೆಯಿಂದಲೇ ಇದ್ದರು. ಈ ವೇಳೆ ಕೆಲ ಸಾಹಸ ದೃಶ್ಯಗಳ ಚಿತ್ರೀಕರಣವನ್ನು ದೃಶ್ಯಗಳ ಶೂಟ್ ಮಾಡಿದ್ದರು. ಆದರೆ ಬಳಿಕ ಏಕಾಏಕಿ ಕುಸಿದುಬಿದ್ದಿದ್ದರು.