ಸ್ವತಂತ್ರ ಲಿಂಗಾಯತ ಧರ್ಮ ಈ ಕಾರಣಕ್ಕೆ ಆಗಬೇಕು.? ಯಾರನ್ನು ಹೊರತು ಪಡಿಸಿ ಕಟ್ಟಬಹುದು.?

 

ಪ್ರತ್ಯೇಕ ಲಿಂಗಾಯತ ಧರ್ಮ ಎನ್ನುವುದು ಒಂದು ವೈಚಾರಿಕ ಸಾಂಸ್ಕöÈತಿಕ ಆಂದೋಲನವಾಗಬೇಕಿತ್ತು. ಆದರೆ ರಾಜಕೀಯ ಮೇಲಾಟಗಳ ವೇದಿಕೆ ಆಗಿಬಿಟ್ಟಿತು. ಹಾಗಾಗದೆ ನಿಜವಾದ ರೀತಿಯಲ್ಲಿ ಲಿಂಗಾಯತ ಧರ್ಮದ ಘೋಷಣೆ ಆಗಬೇಕಿರುವುದು ಅಗತ್ಯ.

* ವಚನಗಳಲ್ಲಿ ವ್ಯಕ್ತವಾಗಿರುವ ಆಶಯಗಳನ್ನು ಆಧರಿಸಿ ಲಿಂಗಾಯತ ಧರ್ಮ ಘೋಷಿತವಾದರೆ ಪ್ರಪಂಚದ ಮಾನವೀಯ ಧರ್ಮಗಳಲ್ಲೊಂದಾಗುತ್ತದೆ.

* ದೇವಸ್ಥಾನ ಮತ್ತು ಪುರೋಹಿತಶಾಹಿಯ ಬಗ್ಗೆ ವಿರೋಧವಿತ್ತು.

* ಜಾತಿ ವ್ಯವಸ್ಥೆ, ವರ್ಣಾಶ್ರಮ ಪದ್ಧತಿಯನ್ನು ಶರಣರು ತಿರಸ್ಕರಿಸಿದ್ದರು.

* ಮೂರ್ತಿ ಪೂಜೆ, ವ್ರತ, ಮುಹೂರ್ತ, ಘಳಿಗೆಗಳಲ್ಲಿ ನಂಬಿಕೆ ಇಲ್ಲ.

* ಈ ಕಾರಣಗಳಿಂದ ಅದು ಪ್ರತ್ಯೇಕ ಧರ್ಮ ಎನ್ನುವುದು ಯಥಾರ್ಥ.

ಪ್ರತ್ಯೇಕ ಧರ್ಮವಾಗುವುದರಿಂದ ಬಸವಾದಿ ಶರಣರನ್ನು ಜಾಗತಿಕ ಮಟ್ಟದಲ್ಲಿ ಧರ್ಮ ಸ್ಥಾಪಕರ ಗೌರವ ಲಭಿಸುತ್ತದೆ.

* ಅಲ್ಪ ಸಂಖ್ಯಾತ ಧರ್ಮಗಳಿಗಿರುವ ಸಾಂವಿಧಾನಿಕ ಸವಲತ್ತು ಸಿಗುತ್ತದೆ.

*ಶಿಕ್ಷಣ ಸಂಸ್ಥೆಗಳ ಆದಾಯಕ್ಕೆ ತೆರಿಗೆ ರಿಯಾಯಿತಿ, ಸೀಟು ಹಂಚಿಕೆಯಲ್ಲಿ ಹೆಚ್ಚಿನ ಸ್ವಾತಂತ್ರ÷್ಯ, ಫೀಸು ನಿಗದಿಯಲ್ಲಿ ರಿಯಾಯತಿ ದೊರೆಯುತ್ತದೆ.

* ಬೇರೆ ಸಮುದಾಯಗಳನ್ನು ಲಿಂಗಾಯತರನ್ನಾಗಿ ಸೇರಿಸಿಕೊಳ್ಳಲು ಅವಕಾಶವಾಗುತ್ತದೆ. ಸಾಮಾಜಿಕವಾಗಿ ಪ್ರಬಲರಾಗಲು ಸಾಧ್ಯ.

*ಪುರೋಹಿತರು, ಜ್ಯೋತಿಷಿಗಳ ಪ್ರಭಾವ ನಿವಾರಣೆಯಾಗಿ ಲಿಂಗಾಯತ ಐಕ್ಯತೆ ಬಲಗೊಳ್ಳುತ್ತದೆ.

*ಸಾಮಾಜಿಕ ಸಂಘ ಸಂಸ್ತೆಗಳಿಗೆ ಅಲ್ಪಸಂಖ್ಯಾತ ಮಾನ್ಯತೆ ಹಾಗೂ ಅನುದಾನ ದೊರೆಯುತ್ತದೆ.

ಸ್ವತಂತ್ರ  ಲಿಂಗಾಯತ ಧರ್ಮದ  ವಿಚಾರಗಳನ್ನು ಇಟ್ಟುಕೊಂಡು ರಾಜಕಾರಣಿಗಳನ್ನು ಬಿಟ್ಟು, ಶರಣರ ತತ್ವಗಳನ್ನು ನಡೆ-ನುಡಿಯಲ್ಲಿ ಪಾಲಿಸುವ ಸ್ವಾಮೀಜಿಯವರನ್ನು ಒಳಗೊಂಡಂತೆ,  ಸ್ವತಂತ್ರ ಲಿಂಗಾಯತ ಧರ್ಮ ಕಟ್ಟುವಲ್ಲಿ ತಮ್ಮಗಳ ಅಭಿಪ್ರಾಯಗಳನ್ನು ಸೇರಿಸಿ ಒಂದು ವೇದಿಕೆ. ಹಾಗೂ ಚರ್ಚೆ ಪ್ರಾರಂಭಿಸ ಬಹುದೆಂಬ ಸದಾಶಯ.

ಚಳ್ಳಕೆರೆ ಬಸವರಾಜ

9916881352

 

 

 

Independent Lingayat religion should be for this reason.? Who can be built except?
Comments (0)
Add Comment